‘ನನ್ನ ಕನ್ಯತ್ವ ಮಾರಾಟಕ್ಕಿಟ್ಟು ಸೋನಾಕ್ಷಿ ನಟಿಯಾದಳು’

393

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಲಿವುಡ್ ಅಂಗಳದಲ್ಲಿ ಗಾಸಿಪ್ ಗೇನೂ ಕಡಿಮೆ ಇಲ್ಲ. ಅದನ್ನು ಮೀರಿದ ಅನೇಕ ವಿಚಾರಗಳು ಆಗಾಗ ಸದ್ದು ಮಾಡುತ್ತವೆ. ಇದೀಗ ನಟಿ ಪೂಜಾ ಮಿಶ್ರಾ ನೀಡಿದ ಹೇಳಿಕೆ ಇದೀಗ ಮತ್ತೊಂದು ವಿವಾದ ಎಬ್ಬಿಸಿದೆ. ಅದೇನು ಅಂದರೆ, ನಟಿ ಪೂಜಾ ಮಿಶ್ರಾಳನ್ನು ಬೇರೆಯೊಬ್ಬರೊಂದಿಗೆ ಮಲಗಿಸಿ ಸೋನಾಕ್ಷಿ ಸಿನ್ಹಾ ನಟಿಯಾದಳು ಅನ್ನೋ ಹೇಳಿಕೆ.

ಸೋನಾಕ್ಷಿ ಸಿನ್ಹಾ ವಿರುದ್ಧ ಬಿಗ್ ಬಾಸ್ ಮಾಜಿ ಸ್ಪರ್ಧಿ, ನಟಿ ಪೂಜಾ ಮಿಶ್ರಾ ಹೀಗೆ ಹೇಳಿದ್ದಾಳೆ. ತಮ್ಮ ಮಗಳನ್ನು ನಟಿ ಮಾಡಲು ಶತ್ರುಘ್ನ ಸಿನ್ಹಾ ಹಾಗೂ ಪೂನಂ ಸಿನ್ಹಾ ನನ್ನನ್ನು ಸೆಕ್ಸ್ ಸ್ಕ್ಯಾಮ್ ಗೆ ಬಳಸಿಕೊಂಡರು ಅನ್ನೋ ಗಂಭೀರ ಆರೋಪ ಮಾಡಿದ್ದಾಳೆ. ಸೋನಾಕ್ಷಿ ಫ್ಯಾಶನ್ ಡಿಸೈನರ್ ಆಗಬೇಕು ಎಂದುಕೊಂಡಿದ್ದಳು. ಆದರೆ, ಆಕೆಯನ್ನ ನಟಿ ಮಾಡಲು, ನನ್ನ ತಂದೆಯ ಬ್ರೇನ್ ವಾಶ್ ಮಾಡಿ ವೇಶ್ಯಾವಾಟಿಕೆ ಮಾಡುವರಷ್ಟೆ ಚಿತ್ರರಂಗಕ್ಕೆ ಬರುತ್ತಾರೆ ಎಂದಿದ್ದರು. ಇದರಿಂದಾಗಿ ಪೂಜಾ ತಂದೆ ಸಿನಿಮಾ ಮಾಡಲು ಬಿಡಲಿಲ್ಲ ಎಂದಿದ್ದಾರೆ.

ಪೂಜಾ ತಂದೆ ಪುಣೆಗೆ ವಾಸ್ತವ್ಯ ಬದಲಿಸಿದ ಬಳಿಕ ನನ್ನನ್ನು ತುಳಿಯಲು ಪ್ರಾರಂಭಿಸಿದರು. 35 ಸಿನಿಮಾಗಳನ್ನು ಕಿತ್ತುಕೊಂಡಿದ್ದಾರೆ ಎಂದಿದ್ದಾರೆ. ನನಗೆ ಡ್ರಗ್ಸ್ ನೀಡಿ ನನ್ನ ವೃತ್ತಿ ಹಾಗೂ ಜೀವನವನ್ನು ಹಾಳು ಮಾಡಿದರು ಎಂದು ಗಂಭೀರವಾಗಿ ಆರೋಪಿಸಿದ್ದಾಳೆ. ಇದಕ್ಕೆ ಸೋನಾಕ್ಷಿ ಹಾಗೂ ಆಕೆ ಕುಟುಂಬಸ್ಥರು ಏನು ಹೇಳುತ್ತಾರೆ ಕಾದು ನೋಡಬೇಕು.




Leave a Reply

Your email address will not be published. Required fields are marked *

error: Content is protected !!