ಆರ್ ಸಿಬಿಗೆ ಗ್ರೀನ್ ಜರ್ಸಿ ಅನ್ ಲಕ್ಕಿ!

377

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಐಪಿಎಲ್ ಟೂರ್ನಿ ಭರ್ಜರಿಯಾಗಿ ನಡೆದಿದೆ. ನಾಲ್ಕರ ಘಟ್ಟಕ್ಕೆ ಆರ್ ಸಿಬಿ ಲಗ್ಗೆ ಇಡುವ ಎಲ್ಲ ಸಾಧ್ಯತೆಗಳಿವೆ. ಕಳೆದ 14 ಟೂರ್ನಿಗಳಲ್ಲಿ ಒಮ್ಮೆಯೂ ಚಾಂಪಿಯನ್ ಆಗದ ಆರ್ ಸಿಬಿ ಅಭಿಮಾನಿಗಳ ಕ್ರೇಜ್ ಕಡಿಮೆಯಾಗಿಲ್ಲ. ಪ್ರತಿ ಬಾರಿ ಈ ಸಲ್ ಕಪ್ ನಮ್ದೆ ಅನ್ನೋ ಡೈಲಾಗ್ ಜೋರು ಇರುತ್ತೆ. ಇಂತಹ ಆರ್ ಸಿಬಿ ಪರಿಸರ ರಕ್ಷಣೆ ಸಂಬಂಧ ಟೂರ್ನಿಯ ಒಂದು ಪಂದ್ಯದಲ್ಲಿ ಹಸಿರು ಬಣ್ಣದ ಜರ್ಸಿ ತೊಟ್ಟು ಕೊಳ್ಳುತ್ತೆ. ಆದರೆ, ಇದು ಅನ್ ಲಕ್ಕಿ ಎನ್ನಲಾಗುತ್ತೆ.

ಈ ಬಾರಿಯ 54ನೇ ಪಂದ್ಯದಲ್ಲಿ ಆರ್ ಸಿಬಿ ಹಾಗೂ ಎಸ್ಆರ್ ಎಚ್ ತಂಡಗಳು ಕಣಕ್ಕೆ ಇಳಿಯಲಿವೆ. ಈ ಪಂದ್ಯದಲ್ಲಿ ಆರ್ ಸಿಬಿ ಹಸಿರು ಬಣ್ಣದ ಜರ್ಸಿ ತೊಟ್ಟುಕೊಳ್ಳಲಿದೆ. ಇದು ಫ್ಯಾನ್ಸ್ ಚಿಂತೆಗೆ ಕಾರಣವಾಗಿದೆ. ಮುಂದಿನ ಮೂರು ಪಂದ್ಯಗಳಲ್ಲಿ ಗೆದ್ದರೆ ನೇರವಾಗಿ ಪ್ಲೇ ಆಪ್ ಪ್ರವೇಶಿಸಲಿದೆ. ಆದರೆ, 2011ರಿಂದ ಹಸಿರು ಜರ್ಸಿಯಲ್ಲಿ ಆಡಿರುವ ಪಂದ್ಯಗಳಲ್ಲಿ ಕೇವಲ 2ರಲ್ಲಿ ಮಾತ್ರ ಗೆದ್ದಿದೆ.

2011ರಲ್ಲಿ ಗೆದ್ದಿದೆ. 2012ರಿಂದ 14ರ ವರೆಗೂ ಸೋತಿದೆ. 2015ರಲ್ಲಿ ಫಲಿತಾಂಶವಿಲ್ಲ. 2016ರಲ್ಲಿ ಗೆದ್ದಿದೆ. ಅಲ್ಲಿಂದ ಮತ್ತೆ ಒಮ್ಮೆಯೂ ಗೆದ್ದಿಲ್ಲ. 2021ರಲ್ಲಿ ನೀಲಿ ಜರ್ಸಿಯಲ್ಲಿಯೂ ಗೆದ್ದಿಲ್ಲ. ನಾಳೆ ಮಧ್ಯಾಹ್ನ 3.30ಕ್ಕೆ ಪಂದ್ಯ ಶುರುವಾಗಲಿದೆ. ಹೀಗಾಗಿ ಅಭಿಮಾನಿಗಳಿಗೆ ಟೆನ್ಷನ್ ಶುರುವಾಗಿದೆ.




Leave a Reply

Your email address will not be published. Required fields are marked *

error: Content is protected !!