ಕಾರ್ಮಿಕರ ಕಣ್ಣೀರು ಒರೆಸಿದ ನಟ ಇದೀಗ ನಿರಾಶ್ರಿತರ ಪಾಲಿನ ಹೀರೋ

340

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಲಿವುಡ್ ಅಂಗಳದ ಸ್ಟಾರ್ ಖಳನಟ ಸೋನು ಸೂದ್, ರಿಯಲ್ ಲೈಫ್ ನಲ್ಲಿ ಹೀರೋ. ಕರೋನಾ ಲಾಕ್ ಡೌನ್ ಟೈಂನಲ್ಲಿ ವಲಸೆ ಕಾರ್ಮಿಕರ ಬೆನ್ನಿಗೆ ನಿಂತರು. ಅವರ ತವರೂರುಗಳಿಗೆ ಹೋಗಲು ಸಕಲ ರೀತಿಯ ಸಹಾಯ ಮಾಡಿದ್ರು. ಇದೀಗ ಚಂಡಮಾರುತದಿಂದ ಸಂಕಷ್ಟಕ್ಕೆ ತುತ್ತಾದವರಿಗೆ ಹೆಗಲು ಕೊಟ್ಟಿದ್ದಾರೆ.

ಮುಂಬೈ ಕರಾವಳಿಯಲ್ಲಿ ಚಂಡಮಾರುತಕ್ಕೆ ಸಿಲುಕಿ ಬದುಕು ಕಳೆದುಕೊಂಡ ಬರೋಬ್ಬರಿ 28 ಸಾವಿರ ಜನರಿಗೆ ಸಹಾಯಹಸ್ತ ಚಾಚಿದ್ದಾರೆ. ಶಾಲೆ, ಕಾಲೇಜುಗಳಲ್ಲಿ ಅವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡುವುದರ ಜೊತೆಗೆ ಆಹಾರ ಪೂರೈಕೆ ಸಹ ಮಾಡಿದ್ದಾರೆ. ಇನ್ನು ಅಸ್ಸಾಂನ 200 ಮಂದಿಯನ್ನ ಅವರೂರುಗಳಿಗೆ ಕಳುಹಿಸಿಕೊಟ್ಟಿದ್ದಾರೆ.

ಇಂದು ನಾವು ಸಂಕಷ್ಟದ ದಿನಗಳನ್ನ ಎದುರಿಸ್ತಿದ್ದೇವೆ. ಸೆಲಬ್ರಿಟಿಗಳು, ಜನಸಾಮಾನ್ಯರು ಕೈಲಾದ ಸಹಾಯ ಮಾಡಬೇಕು. ಸಹಾಯ ಮಾಡುವುದು ಎಲ್ಲರ ಧರ್ಮ. ಅದೇ ರೀತಿ ನಾನು ಒಂದಿಷ್ಟು ಸಹಾಯ ಮಾಡ್ತಿದ್ದೇನೆ ಎಂದಿದ್ದಾರೆ. ಬರೀ ಸಿನ್ಮಾಗಳಲ್ಲಿ ಬಡವರ ಪರವಾಗಿದ್ದೇವೆ ಎಂದು ಬಿಲ್ಡಪ್ ಕೊಟ್ಟು, ಕೋಟಿ ಕೋಟಿ ಸಂಪಾದಿಸುವ ಕೆಲ ನಟರ ನಡುವೆ ರಿಯಲ್ ಲೈಫ್ ನಲ್ಲಿ ಹೀರೋ ಆಗೋದು ಮಾನವೀಯ ಗುಣ ಇರೋರಿಂದ ಮಾತ್ರ ಸಾಧ್ಯ.




Leave a Reply

Your email address will not be published. Required fields are marked *

error: Content is protected !!