ಕರುನಾಡಲ್ಲಿಂದು ನೀವು ಎಂದೂ ಊಹಿಸದಷ್ಟು ಕರೋನಾ ಸೋಂಕಿತರು

420

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಇವತ್ತಿನ ಕರೋನಾ ಹೆಲ್ತ್ ಬುಲೆಟಿನ್ ನಿಜಕ್ಕೂ ರಾಜ್ಯದ ಜನರನ್ನ ಬೆಚ್ಚಿಬೀಳಿಸುತ್ತೆ. ಯಾಕಂದ್ರೆ, ಇಷ್ಟು ದಿನಗಳ ದಾಖಲೆಗಳನ್ನ ಉಡೀಸ್ ಮಾಡಿದೆ. ಯಾಕಂದ್ರೆ, ಇವತ್ತು ಯಾರೂ ಎಣಿಸದಷ್ಟು ಸೋಂಕಿತರು ಪತ್ತೆಯಾಗಿದ್ದಾರೆ. ಅಂದ್ರೆ, ಬರೋಬ್ಬರಿ 515 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದುವರೆಗೂ ರಾಜ್ಯದಲ್ಲಿ 4,835ಕ್ಕೆ ಏರಿಕೆಯಾಗಿದೆ.

ಉಡುಪಿ ಎಲ್ಲ ದಾಖಲೆಗಳನ್ನ ಮುರಿದು ಬರೋಬ್ಬರಿ 204 ಜನರಲ್ಲಿ ಸೋಂಕು ಪತ್ತೆಯಾಗಿದೆ. ಯಾದಗಿರಿ 74, ವಿಜಯಪುರ 53, ಕಲಬುರಗಿ 42, ಬೀದರ 39, ಬೆಳಗಾವಿ 36, ಮಂಡ್ಯ 13, ಬೆಂಗಳೂರು ಗ್ರಾಮಾಂತರ 12, ಬೆಂಗಳೂರು ನಗರ 10, ದಕ್ಷಿಣ ಕನ್ನಡ 8, ಉತ್ತರ ಕನ್ನಡ 7, ಹಾಸನ 3, ಚಿಕ್ಕಬಳ್ಳಾಪುರ 3, ಹಾವೇರಿ 2, ಕೋಲಾರ 1, ಬಾಗಲಕೋಟೆ 1, ದಾವಣಗೆರೆ 1 ಸೋಂಕು ಕಾಣಿಸಿಕೊಳ್ಳುವ ಮೂಲಕ ಇವತ್ತು ನಿಜಕ್ಕೂ ಕರೋನಾ ಸ್ಫೋಟವಾಗಿದೆ.

ಇಂದು 83 ಜನ ಡಿಸ್ಚಾರ್ಜ್ ಆಗುವ ಮೂಲಕ 1688ಕ್ಕೆ ಏರಿಕೆಯಾಗಿದೆ. ಇನ್ನು 3088 ಸೋಂಕಿತ ಪ್ರಕರಣಗಳು ಚಾಲ್ತಿಯಲ್ಲಿವೆ. 57ಕ್ಕೆ ಸಾವಿನ ಸಂಖ್ಯೆ ಆಗಿದೆ. ಏನೇ ಆಗ್ಲಿ ಇವತ್ತಿನ ಸೋಂಕಿತರ ವರದಿ ನಿಜಕ್ಕೂ ಶಾಕಿಂಗ್ ಆಗಿದೆ. ಇದೇ ರೀತಿ ಹೊರಟರೆ 11ನೇ ಸ್ಥಾನದಲ್ಲಿರುವ ಭಾರತ ಟಾಪ್ ಲಿಸ್ಟ್ ನಲ್ಲಿ ಬರುತ್ತಾ ಅನ್ನೋ ಭಯ ಮೂಡಿದೆ.




Leave a Reply

Your email address will not be published. Required fields are marked *

error: Content is protected !!