ಎಸ್ಪಿಬಿ ಕರೋನಾ ವರದಿ ಏನಾಗಿದೆ? ವೈದ್ಯರು ಹೇಳಿದ್ದೇನು?

311

ಪ್ರ ಜಾಸ್ತ್ರ ಸಿನಿಮಾ ಡೆಸ್ಕ್

ಚೆನ್ನೈ: ಭಾರತದ ಖ್ಯಾತ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ಕರೋನಾದಿಂದಾಗಿ ಆಗಸ್ಟ್ 5ರಂದೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದ್ರೆ, ಅವರ ಆರೋಗ್ಯದಲ್ಲಿ ಏರುಪೇರು ಆಗ್ತಿರುವುದ್ರಿಂದ ಕುಟುಂಬಸ್ಥರು, ಆಪ್ತರು, ಅಭಿಮಾನಿಗಳಿಗೆ ಸಾಕಷ್ಟು ಟೆನ್ಷನ್ ಇದೆ. ಇದೀಗ ಅವರ ಕರೋನಾ ವರದಿ ಬಂದಿದ್ದು, ನೆಗೆಟಿವ್ ಎಂದು ಹೇಳಲಾಗ್ತಿದೆ.

ಎಸ್ಪಿಬಿ ಕರೋನಾ ವರದಿ ನೆಗೆಟಿವ್ ಎಂದು ಹೇಳಲಾಗ್ತಿದ್ದು, ಈ ಬಗ್ಗೆ ಅವರ ಮಗ ಚರಣ ಆಗಲಿ, ವೈದ್ಯರಾಗಲಿ ಎಲ್ಲಿಯೂ ಹೇಳಿಲ್ಲ. ಆದ್ರೆ, ಈ ವಿಚಾರ ಅವರ ಅಸಂಖ್ಯಾತ ಅಭಿಮಾನಿಗಳಿಗೆ ಖುಷಿ ನೀಡಿದೆ. ತಮ್ಮ ನೆಚ್ಚಿನ ಗಾಯಕ ಆದಷ್ಟು ಬೇಗ ಗುಣಮುಖರಾಗಲಿ ಎಂದು ಬೇಡಿಕೊಳ್ತಿದ್ದಾರೆ.

ಕಳೆದ 15 ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ ಎಸ್ಪಿಬಿ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಲಾಗ್ತಿದೆ. ಅದೇನೆ ಆಗ್ಲಿ, ತಮ್ಮ ಮಧುರ ಕಂಠದಿಂದ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿಮಾನಿಗಳನ್ನ ಹೊಂದಿರುವ ಎಸ್ಪಿಬಿ ಶೀಘ್ರವಾಗಿ ಗುಣಮುಖರಾಗಲಿ.




Leave a Reply

Your email address will not be published. Required fields are marked *

error: Content is protected !!