ಯಶಸ್ಸಿಗೆ ಶ್ರದ್ಧೆ ಮುಖ್ಯ: ಡಾ.ಎಸ್.ಟಿ.ಬಾಗಲಕೋಟಿ

232

ಪ್ರಜಾಸ್ತ್ರ ಸುದ್ದಿ

ಧಾರವಾಡ: ನಿರೀಕ್ಷಿತ ಫಲಿತಾಂಶ ಮತ್ತು ಯಶಸ್ಸು ಪಡೆಯಲು ಕೆಲಸದಲ್ಲಿ ಸತತ ಪರಿಶ್ರಮ, ಶ್ರದ್ಧೆ, ಅರ್ಪಣಾ ಮನೋಭಾವ ಮತ್ತು ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯ ನ್ಯಾಕ್ ವಿಭಾಗದ ನಿರ್ದೇಶಕ ಡಾ.ಎಸ್.ಟಿ.ಬಾಗಲಕೋಟಿ ಅಭಿಪ್ರಾಯಪಟ್ಟರು. ಕರ್ನಾಟಕ ಕಲಾ ಕಾಲೇಜಿನ ಐಕ್ಯೂಎಸಿ ವಿಭಾಗವು‌ ಕಾಲೇಜಿನ ಫ್ಯಾರನ್ ಹಾಲ್ ನಲ್ಲಿ ‘ಶೈಕ್ಷಣಿಕ ವಾರ್ಷಿಕ  ಗುಣಮಟ್ಟದ ವರದಿ ತಯಾರಿಕೆ’ ಎಂಬ ವಿಷಯದ ಕುರಿತು ಆಯೋಜಿಸಿದ ವಿಶೇಷ ಪುನಶ್ಚೇತನ ಉಪನ್ಯಾಸ ನೀಡಿ ಮಾತನಾಡಿದರು.

ಒಂದು ಶಿಕ್ಷಣ ಸಂಸ್ಥೆ ನಿರೀಕ್ಷಿತ ಮಟ್ಟಕ್ಕೆ ಯಶಸ್ವಿಯಾಗಲು ಅಲ್ಲಿನ ಪರಿಣಾಮಕಾರಿ ಆಡಳಿತ, ಶಿಕ್ಷಕೇತರರ ಸಿಬ್ಬಂದಿ ಸಹಕಾರದಿಂದ ಮಾತ್ರ ಸಾಧ್ಯ ಎಂದ ಅವರು, ಕಾಲೇಜು‌ ಮತ್ತು ವಿಶ್ವವಿದ್ಯಾಲಯಗಳು ಯುಜಿಸಿಯಿಂದ ಶ್ರೇಷ್ಠತೆಯ ಮಾನ್ಯತೆ ಹೊಂದಿದಾಗ ನಿರೀಕ್ಷಿತ ರೀತಿಯಲ್ಲಿ ಧನಸಹಾಯ ಪಡೆಯಲು‌ ಸಾಧ್ಯ ಎಂದರು.

ಕರ್ನಾಟಕ ಕಲಾ ಕಾಲೇಜಿನ ಐಕ್ಯೂಎಸಿ ಸಂಯೋಜಕ ಡಾ.ಹೊನ್ನಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯರಾದ ಡಾ.ಡಿ.ಬಿ ಕರಡೋಣಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸದಲ್ಲಿ ಕಾಲೇಜಿನ ಐಕ್ಯೂಎಸಿ ಸದಸ್ಯರು, ಕಾಲೇಜಿನ ಪ್ರಾಧ್ಯಾಪಕರು, ಶಿಕ್ಷಕೇತರರ ಸಿಬ್ಬಂದಿ ಹಾಜರಿದ್ದರು.




Leave a Reply

Your email address will not be published. Required fields are marked *

error: Content is protected !!