ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ 10 ರೂಪಾಯಿ ಚಾರ್ಜ್

219

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಜನವರಿ 4ರಿಂದ ನಗರದ ಹೃದಯಭಾಗದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಪ್ರಯಾಣಿಸಲು 10 ರೂಪಾಯಿ ಚಾರ್ಜ್ ಕೊಟ್ಟರೆ ಸಾಕು. ನಗರದ ಕೆಲ ಪ್ರಮುಖ ಕೇಂದ್ರಗಳಿಂದ ರೈಲು ಸಂಚಾರ ಪ್ರಾರಂಭವಾಗ್ತಿದೆ.

ಮೆಜೆಸ್ಟಿಕ್, ಯಶವಂತಪುರ, ಯಲಹಂಕ, ಬಂಗಾರಪೇಟೆ, ದೇವನಹಳ್ಳಿ, ಬೆಂಗಳೂರು ಕಂಟೋನ್ಮೆಂಟ್ ಮಾರ್ಗವಾಗಿ ರೈಲು ಸಂಚರಿಸಲಿವೆ. ಹೀಗಾಗಿ ನಗರದ ವಿವಿಧಡೆಯಿಂದ ಹಾಲ್ ಸ್ಟೇಷನ್ ವರೆಗೂ ಆರಂಭಿಕ ಹಂತದಲ್ಲಿ 10 ರೈಲುಗಳು ಸಂಚರಿಸಲಿವೆ.

ಈ ರೈಲಿನ ಪ್ರತಿ ಭೋಗಿ 85 ಆಸನಗಳು ಸೇರಿದಂತೆ ಒಟ್ಟು 325 ಜನರನ್ನು ಹೊತ್ತುಕೊಂಡು ಹೋಗಲಿವೆ. ವಿಮಾನ ಸಂಚರಿಸುವ ವೇಳೆಗೆ ಅನುಸಾರವಾಗಿ ರೈಲು ಸಂಚರಿಸಲಿವೆ. ಅಲ್ದೇ, ವಾರದಲ್ಲಿ 6 ದಿನ ಮಾತ್ರ ಸೇವೆ ನೀಡಲಿದ್ದು ಭಾನುವಾರ ರೈಲು ಸಂಚಾರ ಇರುವುದಿಲ್ಲ.




Leave a Reply

Your email address will not be published. Required fields are marked *

error: Content is protected !!