ಶ್ರೀಲಂಕಾ ಕ್ರಿಕೆಟ್ ತಂಡದಲ್ಲಿ ಕೋವಿಡ್ ಕಂಟಕ

239

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಕೊಲಂಬೊ: ಶ್ರೀಲಂಕಾ ವಿರುದ್ಧ ಕ್ರಿಕೆಟ್ ಸರಣಿ ಆಡಲು ಟೀಂ ಇಂಡಿಯಾ ತೆರಳಿದೆ. ಇನ್ನು ಕೆಲ ದಿನಗಳಲ್ಲಿಯೇ ಎರಡು ತಂಡಗಳ ನುಡವೆ ಪಂದ್ಯ ಶುರುವಾಗಬೇಕಿದೆ. ಇದರ ನಡುವೆ ಶ್ರೀಲಂಕಾ ತಂಡದಲ್ಲಿ ಕರೋನಾ ಕಂಟಕ ಶುರುವಾಗಿದೆ.

ಶ್ರೀಲಂಕಾ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್ ಫ್ಲವರ್ ಗೆ ಗುರುವಾರ ಕರೋನಾ ಸೋಂಕು ಇರುವುದು ಪತ್ತೆಯಾಗಿದೆ. ಇದೀಗ ಡೇಟಾ ಅನಾಲಿಸ್ಟ್ ಗೆ ಸೋಂಕು ದೃಢಪಟ್ಟಿದೆ. ಇಂಗ್ಲೆಂಡ್ ಪ್ರವಾಸ ಮುಗಿಸಿಕೊಂಡು ಬಂದ ತಂಡದಲ್ಲಿ ಕರೋನಾ ಕಾಣಿಸಿಕೊಂಡಿದೆ. ಇಂಗ್ಲೆಂಡ್ ತಂಡದ 7 ಜನರಲ್ಲಿ ಸೋಂಕು ಇರುವುದು ಕೊನೆಯ ಪಂದ್ಯದಲ್ಲಿ ಗೊತ್ತಾಗಿತ್ತು.

ಆಟಗಾರರು, ಸಿಬ್ಬಂದಿ, ಸಹಾಯಕ ಸಿಬ್ಬಂದಿ, ಕೋಚ್ ಗಳಿಗೆ ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆಗ ಸದ್ಯ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ತಂಡದ ಎಲ್ಲರನ್ನ ಕ್ವಾರಂಟೈನ್ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!