10ನೇ ತರಗತಿ ಪರೀಕ್ಷೆ ದಿನಾಂಕ ಘೋಷಣೆ

285

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕೋವಿಡ್ ನಿಂದ ಮುಂದೂಡಲಾಗಿದ್ದ 10ನೇ ತರಗತಿ ಪರೀಕ್ಷೆಯ ದಿನಾಂಕವನ್ನ ಶಿಕ್ಷಣ ಸಚಿವ ಸುರೇಶಕುಮಾರ ತಿಳಿಸಿದ್ದಾರೆ. ಜುಲೈ 19 ಹಾಗೂ 22ಕ್ಕೆ ಪರೀಕ್ಷೆ ದಿನಾಂಕ ಘೋಷಣೆ ಮಾಡಲಾಗಿದೆ. ಮೊದಲು ಮೂರು ಐಚ್ಛಿಕ ವಿಷಯ ಬಳಿಕ ಭಾಷಾ ವಿಷಯದ ಪರೀಕ್ಷೆ ನಡೆಯಲಿದೆ.

ಈ ಸಂಬಂಧ ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ಪರೀಕ್ಷೆಯ ಪಾರದರ್ಶಕತೆ ಜೊತೆಗೆ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಲಾಗಿದೆ. ಇನ್ನು ಕೋವಿಡ್ ನಿಂದ ಅನಾಥವಾದ ಮಕ್ಕಳಿಗೆ, ಅವರ ಮನೆಯ ಹತ್ತಿರದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಇದರ ಲಾಭವನ್ನ 10 ಸಾವಿರ ಮಕ್ಕಳು ಪಡೆಯುತ್ತಿದ್ದಾರೆ.

ಜೂನ್ 30 ವಿದ್ಯಾರ್ಥಿಗಳ ಹಾಲ್ ಟಿಕೆಟ್ ಗಳನ್ನ ಶಾಲೆಗಳಿಗೆ ತಲುಪಲಿದೆ. ಇದನ್ನ ಸ್ಕೂಲ್ ಮೂಲಕ ಮುಖ್ಯಸ್ಥರು ಡೌನೋಲ್ಡ್ ಮಾಡಿಕೊಳ್ಳಬಹುದು. ಗಡಿ ಜಿಲ್ಲೆಗೂ ಯಾವ ರೀತಿಯ ಕ್ರಮ ತೆಗೆದುಕೊಳ್ಳಬೇಕು ಅನ್ನೋದರ ಕುರಿತು ಸಹ ಅಧಿಕಾರಿಗಳ ಜೊತೆ ಮಾತ್ನಾಡಲಾಗಿದೆ. ಇನ್ನು ಕೋವಿಡ್ ಲಕ್ಷಣಗಳು ಇರುವ ವಿದ್ಯಾರ್ಥಿಗಳು ಇದ್ರೆ ಅವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ. ಕೋವಿಡ್ ದೃಢಪಟ್ಟ ವಿದ್ಯಾರ್ಥಿಗಳಿದ್ದು, ಅವರು ಪರೀಕ್ಷೆ ಬರೆಯಲು ಹಂಬಲಿಸಿದ್ರೆ ಅವರಿಗೆ ಕೋವಿಡ್ ಕೇಂದ್ರದಲ್ಲೇ ಬರೆಯಲು ಅವಕಾಶ ಕಲ್ಪಿಸಲಾಗ್ತಿದೆ.

ಇನ್ನು ಶಿಕ್ಷಕರು, ಪರೀಕ್ಷೆಗೆ ನೇಮಕವಾಗುವ ಸಂಬಂಧಿ ಸೇರಿದಂತೆ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು. ಈ ಸಂಬಂಧ ಆರೋಗ್ಯ ಇಲಾಖೆ ಜೊತೆ ಮಾತ್ನಾಡಲಾಗಿದೆ. ಮಕ್ಕಳಿಗೆ ಸರ್ಜಿಕಲ್ ಅಥವ ಕ್ಲಾಥ್ ಮಾಸ್ಕ್ ನೀಡಲು ತಜ್ಞರು ಹೇಳಿದ್ದಾರೆ. ಹೀಗಾಗಿ ಎನ್ 95 ಮಾಸ್ಕ್ ಅವಶ್ಯಕತೆಯಿಲ್ಲವೆಂದು ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!