ಡಿ ಬಾಸ್ ಫ್ಯಾನ್ಸ್ ದಾಖಲೆ ಮುರಿದ ಕಿಚ್ಚ ಫ್ಯಾನ್ಸ್

230

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟ ಕಿಚ್ಚ ಸುದೀಪ್ ಹುಟ್ಟು ಹಬ್ಬಕ್ಕೆ ಇನ್ನೆರಡು ದಿನಗಳಿದ್ದು, ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಅಬ್ಬರಿಸುತ್ತಿದ್ದಾರೆ. ನೆಚ್ಚಿನ ನಟನ ಹುಟ್ಟು ಹಬ್ಬದ ಸಲುವಾಗಿ ಬಿಡುಗಡೆ ಮಾಡಿದ ಕಾಮನ್ ಡಿಪಿ 24 ಗಂಟೆಯಲ್ಲಿ ಹೊಸ ದಾಖಲೆ ಬರೆದಿದೆ.

ಯೆಸ್, ನಟ ಸದೀಪ್ ಅಭಿಮಾನಿಗಳು ಕಿಂಗ್ ಕಿಚ್ಚ ಬರ್ತ್ ಡೇ ಸಿಡಿಪಿ 24ಗಂಟೆಯಲ್ಲಿ 44 ಲಕ್ಷ ಟ್ವೀಟ್ ಆಗಿದೆ. ದರ್ಶನ್ ಫ್ಯಾನ್ಸ್ ಅವರ ಬರ್ತ್ ಡೇ ಟೈಂನಲ್ಲಿ 42 ಲಕ್ಷ ಟ್ವೀಟ್ ಮಾಡಿದ್ದರು. ಅದನ್ನು ಸುದೀಪ್ ಫ್ಯಾನ್ಸ್ ಬ್ರೇಕ್ ಮಾಡಿದ್ದು, ಅದಕ್ಕೂ ಸೋಷಿಯಲ್ ಫೈಟ್ ನಡೆದಿದೆ.

ಕಳೆದ ವರ್ಷ ಡಿ ಬಾಸ್ ಬರ್ತ್ ಡೇ 26 ಲಕ್ಷ ಟ್ವೀಟ್ ಆಗಿತ್ತು. ಇದನ್ನು ಯಶ್ ಫ್ಯಾನ್ಸ್ ಬ್ರೇಕ್ ಮಾಡಲು ನೋಡಿದ್ದರು ಆಗಿರಲಿಲ್ಲ. ಈ ವರ್ಷದ ಹುಟ್ಟು ಹಬ್ಬದ 42 ಲಕ್ಷ ಟೀಟ್ ನ್ನು ಸುದೀಪ್ ಫ್ಯಾನ್ಸ್ 44 ಲಕ್ಷ ಮಾಡಿದ್ದು, ದರ್ಶನ್ ಫ್ಯಾನ್ಸ್ ಇಷ್ಟೇನಾ, ಬರೀ 2 ಲಕ್ಷ ಮುನ್ನಡೆ. ಇದೇನು ದೊಡ್ಡದಲ್ಲ. ನಾವು ನಿಮಗೆ 12 ಲಕ್ಷ ಟಾರ್ಗೆಟ್ ಕೊಟ್ಟಿದ್ದೇವು ಎಂದು ಫೈಟ್ ನಡೆಸಿದ್ದಾರೆ. ಒಟ್ಟಿನಲ್ಲಿ ದರ್ಶನ್, ಸುದೀಪ್ ನಡುವಿನ ಸ್ನೇಹ ಮುರಿದ ಬಿದ್ದಾಗಿನಿಂದ ಇಬ್ಬರ ಫ್ಯಾನ್ಸ್ ಕಚ್ಚಾಟ ನಡೆಯುತ್ತಲೇ ಇದೆ.  




Leave a Reply

Your email address will not be published. Required fields are marked *

error: Content is protected !!