ಕನ್ನಡದಲ್ಲೂ ನೋಡಬಹುದು ‘ಸೈರಾ’ ಮೂವಿ!

1134

ಮೆಗಾಸ್ಟಾರ್ ಚಿರಂಜೀವಿ, ಕಿಚ್ಚ ಸುದೀಪ ಸೇರಿದಂತೆ ಬಹುದೊಡ್ಡ ತಾರಾಗಣವಿರುವ ಸೈರಾ ಮೂವಿ ಕನ್ನಡದಲ್ಲಿಯೂ ನೋಡಬಹುದು ಎನ್ನಲಾಗ್ತಿದೆ. ತೆಲುಗಿನ ಸೈರಾ ನರಸಿಂಹ ರೆಡ್ಡಿ ಸಿನಿಮಾವನ್ನ ಕನ್ನಡಲ್ಲಿಯೂ ಡಬ್ ಆಗ್ತಿದೆ ಅನ್ನೋ ಮಾತುಗಳು ಕೇಳಿ ಬರ್ತಿವೆ.

ಈ ಹಿಂದೆ ಅನೇಕ ತಮಿಳು, ತೆಲುಗು ಮೂವಿಗಳು ಡಬ್ ಆಗಿವೆ. ಅದೆ ರೀತಿ ಸೈರಾ ಡಬ್ ಆಗ್ತಿದೆಯಂತೆ. ಅಲ್ದೇ, ಕನ್ನಡದ ಟಿವಿ ರೈಟ್ಸ್ ಸಹ ಭರ್ಜರಿ ಬೆಲೆಗೆ ಸೇಲ್ ಆಗಿದೆಯಂತೆ. ಆಗಸ್ಟ್ 20ಕ್ಕೆ ಟ್ರೇಲರ್ ರಿಲೀಸ್ ಆಗ್ತಿದ್ದು, ಅಂದು ಕನ್ನಡದ ಟ್ರೇಲರ್ ರಿಲೀಸ್ ಆಗಬಹುದು.

ಬ್ರಿಟಿಷರ ವಿರುದ್ಧ ಗಿಡ್ಡಲೂರು ಬಂಡಾಯದಲ್ಲಿ ಹೋರಾಡಿದ ಉಯ್ಯಾಲವಾಡ ನರಸಿಂಹರೆಡ್ಡಿ ಕಥಾಹಂದರ ಮೂವಿಯಲ್ಲಿ ನಟ ಚಿರಂಜೀವಿ, ಕಿಚ್ಚ ಸುದೀಪ, ಅಮಿತಾಭ ಬಚ್ಚನ, ವಿಜಯ ಸೇತುಪತಿ, ನಯನತಾರಾ, ತಮನ್ನಾ ಭಾಟಿಯಾ, ಜಗಪತಿ ಬಾಬು ಸೇರಿದಂತೆ ಮಲ್ಟಿ ಸ್ಟಾರ್ ಮೂವಿಯಾಗಿದೆ.




Leave a Reply

Your email address will not be published. Required fields are marked *

error: Content is protected !!