ತಡಬಡಾಯಿಸಿದ ಪ್ರಧಾನಿ ಮೋದಿ: ಎಲ್ಲೆಡೆ ಟ್ರೋಲ್

565

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಡಾವೋಸ್ ನ ವಿಶ್ವ ಆರ್ಥಿಕ ವೇದಿಕೆಯಲ್ಲಿ 5 ದಿನಗಳ ಸಮಾವೇಶ ನಡೆಯುತ್ತಿದೆ. ಹೀಗಾಗಿ ವಿಶ್ವದ ಪ್ರಮುಖ ರಾಷ್ಟ್ರಗಳ ನಾಯಕರಿಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳು ಅವಕಾಶ ನೀಡಲಾಗಿದೆ. ಮೊದಲ ದಿನವಾದ ಸೋಮವಾರ ಪ್ರಧಾನಿ ಮೋದಿ ಹಿಂದಿಯಲ್ಲಿ ಭಾಷಣ ಮಾಡುತ್ತಿದ್ದರು. ಈ ವೇಳೆ ಟೆಲಿಪ್ರಾಂಟರ್ ಕೈಕೊಟ್ಟಿದೆ. ಹೀಗಾಗಿ ಪ್ರಧಾನಿ ಮೋದಿ ತಡಬಡಾಯಿಸಿದ್ದಾರೆ.

ಟೆಲಿಪ್ರಾಂಟರ್ ಕೈಕೊಟ್ಟ ತಕ್ಷಣ ಪದೆಪದೆ ಎಡ ಭಾಗಕ್ಕೆ ನೋಡುವುದು ಮಾಡಿದ್ದಾರೆ. ಮಾತನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ.  ವರ್ಚುವಲ್ ಸಭೆಯಲ್ಲಿ ಭಾಗವಹಿಸಿದ್ದ ಅಧ್ಯಕ್ಷರಿಗೆ ನನ್ನ ಧ್ವನಿ ಕೇಳಿಸುತ್ತಿದ್ದೆಯೆ ಎಂದು ಕೇಳಿ ಸಮಸ್ಯೆಯನ್ನು ತಿಳಿಗೊಳಿಸಲು ನೋಡಿದ್ದಾರೆ. ಅದೆ ಇದೀಗ ದೊಡ್ಡ ಮಟ್ಟದಲ್ಲಿ ಟ್ರೋಲ್ ಆಗುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಪ್ರಧಾನಿ ಮೋದಿ ಕಾಲೆಳೆಯುವ ಕೆಲಸ ನಡೆದಿದೆ. ದೊಡ್ಡ ಭಾಷಣಕಾರ, ಮಹಾನ್ ವಾಗ್ಮಿ ಹೀಗೆ ತಡಬಡಾಯಿಸುವುದು ಅಂದರೆ ಹೇಗೆ ಎಂದು ಲೇವಡಿ ಮಾಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ, ಟೆಲಿಪ್ರಾಂಟರ್ ಕೂಡಾ ಅಷ್ಟೊಂದು ಸುಳ್ಳುಗಳನ್ನು ತೆಡೆದುಕೊಳ್ಳಲಿಲ್ಲವೆಂದು ಪರೋಕ್ಷವಾಗಿ ಪ್ರಧಾನಿ ಮೋದಿ ಹೆಸರು ಪ್ರಸ್ತಾಪಿಸದೆ ಕಾಲೆಳೆದಿದ್ದಾರೆ.




Leave a Reply

Your email address will not be published. Required fields are marked *

error: Content is protected !!