ಉಗ್ರರ ಅಟ್ಟಹಾಸಕ್ಕೆ 37 ಮುಗ್ಧ ಜೀವಗಳು ಬಲಿ

390

ಕ್ವಾಗಾಡೌಗೌ: ಪಶ್ಚಿಮ ಆಫ್ರಿಕಾ ದೇಶದಲ್ಲಿ ಉಗ್ರಗಾಮಿಗಳ ಅಟ್ಟಹಾಸಕ್ಕೆ ಬರೊಬ್ಬರಿ 37 ಮುಗ್ಧ ಜೀವಗಳು ಬಲಿಯಾಗಿವೆ. ಅಲ್ದೇ, 60ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರಲ್ಲಿ ಅನೇಕರ ಸ್ಥಿತಿ ಗಂಭೀರವಾಗಿದೆ.

ಬುರ್ಕಿನಾ ಫಾಸೋದಾ ಗಂಡಿ ಕಂಪನಿಯ ಕಾರ್ಮಿಕರನ್ನ 5 ಬಸ್ ಗಳಲ್ಲಿ ಕೆರೆದುಕೊಂಡು ಹೋಗುವ ಟೈಂನಲ್ಲಿ ದಾಳಿ ನಡೆದಿದೆ. ಈ ವೇಳೆ 37 ಜನರನ್ನ ಹತ್ಯೆ ಮಾಡಲಾಗಿದೆ. ಈ ನರಮೇಧದಲ್ಲಿ 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೂರ್ವ ಪ್ರಾಂತದಲ್ಲಿ ಗರ್ವನರ್ ಸೈಡೌ ಸಂಗು ತಿಳಿಸಿದ್ದಾರೆ.

ಐದು ಬಸ್ ಗಳ ಹಿಂದೆ ಬೆಂಗಾವಲ ವಾಹನಗಳು ಇದ್ರೂ ಅವುಗಳಿಗೆ ಹಾನಿಯಾಗಿದೆ. ಸ್ಯಾಮಪೋ ಗಣಿ ಸಂಸ್ಥೆಗೆ ಸ್ಥಳೀಯ ಕಾರ್ಮಿಕರು, ಗುತ್ತಿಗೆದಾರರು ಮತ್ತು ಸಾಮಾಗ್ರಿಗಳನ್ನ ಪೂರೈಕೆ ಮಾಡಿಕೊಂಡು ಹೋಗುತ್ತಿದ್ದ ಐದು ಬಸ್ ಗಳ ಮೇಲೆ ನಿರ್ಜನ ಪ್ರದೇಶದಲ್ಲಿ ದಾಳಿ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!