ಮುಂಬೈ ದಾಳಿ ಮಾಸ್ಟರ್ ಮೈಂಡ್ ಹಫೀಜ್ ಗೆ 31 ವರ್ಷ ಶಿಕ್ಷೆ

397

ಪ್ರಜಾಸ್ತ್ರ ಸುದ್ದಿ

ಕರಾಚಿ: ಭಯೋತ್ಪಾದಕ ಹಫೀಜ್ ಸೈಯೀದ್ ಗೆ ಪಾಕ್ ನ್ಯಾಯಾಲಯ 31 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಹಲವಾರು ಭಯೋತ್ಪಾದಕ ದಾಳಿಯನ್ನು ಸಂಘಟಿಸಿದ್ದ. ಈ ಮೂಲಕ ಧನಸಹಾಯ ಮಾಡಿದ್ದ. ಅಲ್ದೇ, 2008ರಲ್ಲಿ ಮುಂಬೈ ಮೇಲಿನ ಬಾಂಬ್ ದಾಳಿಯ ಮಾಸ್ಟರ್ ಮೈಂಡ್ ಇವನು.

ಮುಂಬೈ ಮೇಲಿನ ದಾಳಿಯಲ್ಲಿ 166 ಜನರು ಮೃತಪಟ್ಟಿದ್ದರು. ಹಲವಾರು ಜನರು ಗಾಯಗೊಂಡಿದ್ದರು. ಹಫೀಜ್ ಸಯೀದ್ ನನ್ನ ಜಾಗತಿಕ ಭಯೋತ್ಪಾದಕ ಎಂದು ಯುಎಸ್ ಘೋಷಿಸಿದೆ.

ಪಾಕಿಸ್ತಾನ ಮೂಲದ ಈತ ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯ ಸಹ ಸಂಸ್ಥಾಪಕ, ಜಮಾತ್ ಉದ್ ದವಾಹ್ ಸಂಘಟನೆಯ ಮುಖ್ಯಸ್ಥ. ಇವನಿಗೆ ಎರಡು ಪ್ರಕರಣಗಳಲ್ಲಿ ಪಾಕ್ ಕೋರ್ಟ್ 31 ವರ್ಷಗಳ ಶಿಕ್ಷೆಯನ್ನು ವಿಧಿಸಿದೆ.




Leave a Reply

Your email address will not be published. Required fields are marked *

error: Content is protected !!