ರಂಗಭೂಮಿ ಹಿರಿಯ ಕಲಾವಿದೆ ಲಕ್ಷ್ಮಿಬಾಯಿ ಏಣಗಿ ನಿಧನ

444

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಧಾರವಾಡ: ರಂಗಭೂಮಿ ಹಿರಿಯ ಕಲಾವಿದೆ ಲಕ್ಷ್ಮಿಬಾಯಿ ಬಾಳಪ್ಪ ಏಣಗಿ(96) ಇಂದು ನಿಧನರಾಗಿದ್ದಾರೆ. ಇಲ್ಲಿನ ರಜತಗಿರಿ ನಿವಾಸದಲ್ಲಿ ನಿಧನರಾಗಿದ್ದು, ಮಧ್ಯಾಹ್ನ ಹೊಸಯಲ್ಲಾಪುರದಲ್ಲಿರುವ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿಸಲಾಗಿದೆ.

ಲಕ್ಷ್ಮಿಬಾಯಿ ಅವರು ಖ್ಯಾತ ರಂಗಭೂಮಿ ಕಲಾವಿದರಾದ ಏಣಗಿ ಬಾಳಪ್ಪನವರ ಪತ್ನಿ. 1940-50ರ ದಶಕದಲ್ಲಿ ಕನ್ನಡ ಹಾಗೂ ಮರಾಠಿ ರಂಗಭೂಮಿ ಕಲಾವಿದರಾಗಿದ್ದರು. ಪತಿಯ ಜೊತೆಗೆ ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಹಲವು ಚಲನಚಿತ್ರಗಳಲ್ಲಿಯೂ ನಟಿಸಿದ್ದಾರೆ. ಇವರ ಮಗ ಏಣಗಿ ನಟರಾಜ್ ಸಹ ಸಿನಿಮಾ ನಟರಾಗಿದ್ದರು.

ಇವರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳು ಸಂದಿವೆ.




Leave a Reply

Your email address will not be published. Required fields are marked *

error: Content is protected !!