ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಮನೋರಂಜನ್ ರವಿಚಂದ್ರನ್ ನಟನೆಯ ಪ್ರಾರಂಭ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಮನೋರಂಜನ್ ಗೆ ಜೋಡಿಯಾಗಿ ಕೀರ್ತಿ ಕಲ್ಕೇರಿ ಜೋಡಿಯಾಗಿದ್ದಾರೆ.
ಪ್ರೀತಿಯ ಕಥಾ ಹಂದರ ಇರುವ ಚಿತ್ರದಲ್ಲಿ ಮಾಸ್ ಸ್ಟೋರಿಯೂ ಇದೆ. ಮನು ಕಲ್ಯಾಡಿ ನಿರ್ದೇಶನ ಮಾಡಿದ್ದಾರೆ. ಜನುಶ್ರೀ ತನುಷ್ ಪ್ರೊಡೆಕ್ಷನ್ ಅಡಿಯಲ್ಲಿ ಜಗದೀಶ್ ಕಲ್ಯಾಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಸಂತೋಷ್ ನಾಯ್ಕ್ ಸಾಹಿತ್ಯ, ಪ್ರಜ್ವಲ್ ಪೈ ಮ್ಯೂಸಿಕ್ ಇದೆ. ಮೇ 13ಕ್ಕೆ ಪ್ರಾರಂಭ ಚಿತ್ರ ರಿಲೀಸ್ ಆಗುತ್ತಿದೆ.