ಪ್ಯಾನ್-ಆದಾರ್ ಲಿಂಕ್ ಹೆಸರಲ್ಲಿ ಸರ್ಕಾರದಿಂದಲೇ ಲೂಟಿ!

431

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಈಗ ಎಲ್ಲೆಡೆ ಚರ್ಚೆ ಆಗುತ್ತಿರುವುದು ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಮಾಡುವ ವಿಚಾರ. ಮಾರ್ಚ್ 31 ಕೊನೆಯ ದಿನವೆಂದು ಹೇಳಲಾಗಿದೆ. ಈಗ ಪ್ರಶ್ನೆ ಎದ್ದಿರುವುದು ಒಂದು ಸಾವಿರ ರೂಪಾಯಿಯದು. ಹೌದು, ಪ್ಯಾನ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಲು ಒಬ್ಬರು 1 ಸಾವಿರ ರೂಪಾಯಿ ಕೊಡಬೇಕು. ಒಂದು ಕುಟುಂಬದಲ್ಲಿ ಸುಮಾರಿ 5 ಜನರ ಪ್ಯಾನ್ ಕಾರ್ಡ್ ಇದ್ದರೆ 5 ಸಾವಿರ ರೂಪಾಯಿ ಕೊಟ್ಟು ಆಧಾರ್ ಲಿಂಕ್ ಮಾಡಿಸಬೇಕು.

ಕೇಂದ್ರ ಸರ್ಕಾರದ ಈ ನೀತಿ ವಿರುದ್ಧ ಜನಸಾಮಾನ್ಯರ ಆಕ್ರೋಶ ಬುಗಿಲೆದ್ದಿದೆ. ಯಾಕಂದ್ರೆ ಮಾರ್ಚ್ 31ರೊಳಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳದಿದ್ದರೆ ಮುಂದೆ 10 ಸಾವಿರ ರೂಪಾಯಿ ದಂಡ ಎಂದು ಹೇಳಲಾಗುತ್ತಿದೆ. ಜನರಸಾಮಾನ್ಯರ ಬದುಕು ಹಸನು ಮಾಡುತ್ತೇವೆ ಎಂದು ಬಂದ ಬಿಜೆಪಿ ಸರ್ಕಾರ ಪ್ರತಿ ಹಂತದಲ್ಲಿಯೂ ಸುಲುಗೆ ಮಾಡುತ್ತಿದೆ ಎಂದು ಕಿಡಿ ಕಾರಲಾಗುತ್ತಿದೆ.

ಬೆಲೆ ಏರಿಕೆ ಬಿಸಿ, ನಿರುದ್ಯೋಗ ಸಮಸ್ಯೆ, ತೆರಿಗೆ ಹೆಚ್ಚಳ ಸೇರಿ ಪ್ರತಿಯೊಂದಕ್ಕೂ ಜನರು ಹಣ ಕಳೆದುಕೊಳ್ಳುತ್ತಿದ್ದಾರೆ. ವರ್ಷಕ್ಕೆ ಸರಾಸರಿ 40 ರಿಂದ 50 ಸಾವಿರ ರೂಪಾಯಿ ಸಾಮಾನ್ಯ ಜನರು ಕಳೆದುಕೊಳ್ಳುತ್ತಿದ್ದಾರಂತೆ. ಈಗ ಆಧಾರ್ ಲಿಂಕ್ ಹೆಸರಲ್ಲಿ ಪ್ರತಿಯೊಬ್ಬರಿಂದ 1 ಸಾವಿರ ರೂಪಾಯಿ ಪಡೆಯಲಾಗುತ್ತಿದೆ. ಸೈಬರ್ ಸೆಂಟರ್ ಗೆ ಹೋದರೆ ಅಲ್ಲಿ ಪ್ರೊಸೆಸಿಂಗ್ ಫೀಸ್ ಎಂದು 500 ರೂಪಾಯಿ ಪಡೆಯಲಾಗುತ್ತಿದೆಯಂತೆ.

ಒಂದು ಅಂದಾಜಿನ ಪ್ರಕಾರ ಸದ್ಯ ಬಾಕಿ ಉಳಿದಿರುವ ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಿದರೆ ಸುಮಾರು 28 ಸಾವಿರ ಕೋಟಿ ರೂಪಾಯಿ ಸಂಗ್ರಹವಾಗಲಿದೆಯಂತೆ. ಒಂದು ಕಡೆ ಜನರಿಗೆ ಆರ್ಥಿಕ ಸಾವಲಂಬನೆಯಿಂದ ಬದುಕುವಂತೆ ಮಾಡುತ್ತೇವೆ ಎಂದು ಹೇಳಿದವರು ನೀತಿ, ನಿಯಮದ ಹೆಸರಿನಲ್ಲಿ ಹಗಲಿನಲ್ಲಿಯೇ ದರೋಡೆ ಮಾಡುತ್ತಿದ್ದಾರೆ ಎಂದು ಸಾರ್ವನಿಕರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!