ಹತ್ತೇ ನಿಮಿಷದಲ್ಲಿ ಇ ಪ್ಯಾನ್ ಕಾರ್ಡ್ ಪಡೆಯಿರಿ

433

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಪ್ಯಾನ್ ಕಾರ್ಡ್ ಮಾಡಿಸಲು ಇನ್ಮುಂದೆ ಎಲ್ಲೆಡೆ ಸುತ್ತಾಡಬೇಕಿಲ್ಲ. ದಾಖಲೆಗಳನ್ನ ಹಿಡಿದುಕೊಂಡು ಅವರಿಗೆ ಕೊಡಿ, ಅದಕ್ಕೆ ಇಷ್ಟೊಂದು ಫೀ ಕೊಡಬೇಕಾಗಿಲ್ಲ. ಹತ್ತೇ ನಿಮಿಷದಲ್ಲಿ ಆನ್ ಲೈನ್ ಮೂಲಕ ಇ ಪ್ಯಾನ್ ಕಾರ್ಡ್ ಪಡೆಯಬಹುದು.

ಯೆಸ್, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಇ ಪ್ಯಾನ್ ಪಡೆಯುವ ಪ್ರಕ್ರಿಯೆಗೆ ಗುರುವಾರ ಚಾಲನೆ ನೀಡಿದ್ದಾರೆ. ತೆರಿಗೆ ಇಲಾಖೆಯ ವೆಬ್ ಸೈಟ್ ಮೂಲಕ ನೀವು ನಿಮ್ಮ ಇ ಪ್ಯಾನ್ ಪಡೆಯಬಹುದು. ಈ ಮೂಲಕ ಸಂಪೂರ್ಣ ಮಾಹಿತಿಯನ್ನ ತೆರಿಗೆ ಇಲಾಖೆಗೆ ಸಲ್ಲಿಸುವ ಕಾಟವಿಲ್ಲ. ನಿಮ್ಮ ಆಧಾರ್ ನಂಬರ್ ಜೋಡಣೆ ಮಾಡಿದ್ರೆ ಸಾಕು, ಅದಕ್ಕೆ ಲಿಂಕ್ ಆಗಿರುವ ಮೊಬೈಲ್ ಗೆ ಒಟಿಪಿ ಬರುತ್ತೆ. ಅದನ್ನ ಅಪ್ಲೋಡ್ ಮಾಡಿದ್ರೆ ನಿಮ್ಗೆ ಇ ಪ್ಯಾನ್ ಸಿಗುತ್ತೆ. ಫೆಬ್ರವರಿ 12, 2020ರಂದು ಪ್ರಾಯೋಗಿಕವಾಗಿ ಇದನ್ನ ಜಾರಿಗೆ ತರಲಾಗಿತ್ತು. ಇದುವರೆಗೂ ಈ ಮೂಲಕ 6,77,680 ಇ ಪ್ಯಾನ್ ವಿತರಣೆ ಮಾಡಲಾಗಿದೆ. ತೆರಿಗೆ ಇಲಾಖೆ ವೆಬ್ ಸೈಟ್ ಇಲ್ಲಿದೆ ನೋಡಿ.

https://www.incometaxindiaefiling.gov.in/home



Leave a Reply

Your email address will not be published. Required fields are marked *

error: Content is protected !!