ಒಂದೇ ದಿನದಲ್ಲಿ ದಾಖಲೆಯ ಸೋಂಕು.. ಟಾಪ್ 9 ಸ್ಥಾನಕ್ಕೆ ಭಾರತ

418

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರೋನಾ ಸೋಂಕಿನ ವರದಿ ಬಿಡುಗಡೆ ಮಾಡಿದೆ. ಇದರಲ್ಲಿ ಒದೇ ದಿನದಲ್ಲಿ ಬರೋಬ್ಬರಿ 7,466 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 1,65,799ಕ್ಕೆ ಏರಿಕೆಯಾಗಿದೆ.

ಶುಕ್ರವಾರ ಹೊಸ ಸೋಂಕಿತರ ಲಿಸ್ಟ್ ರಿಲೀಸ್ ಮಾಡಿದ್ದು, ಇದರಲ್ಲಿ 7,466 ಜನರಿದ್ದಾರೆ. ಹೀಗಾಗಿ ಕರೋನಾಗೆ ತುತ್ತಾದ ಟಾಪ್ 10 ದೇಶಗಳ ಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಬಂದಿದೆ. ಇದುವರೆಗೂ 4,711 ಜನರು ಸಾವನ್ನಪ್ಪಿದ್ದಾರೆ. 71,106 ಜನರು ಗುಣಮುಖರಾಗಿದ್ದಾರೆ.

ಕರೋನಾ ಹುಟ್ಟಿಕೊಂಡ ಚೀನಾ 15ನೇ ಸ್ಥಾನದಲ್ಲಿದೆ. ಇಲ್ಲಿ 86,943 ಜನರಲ್ಲಿ ಸೋಂಕಿದೆ. 890 ಜನರು ಸಾವನ್ನಪ್ಪಿದ್ದು, 36,150 ಜನ ಗುಣಮುಖರಾಗಿದ್ದಾರೆ. ಆದ್ರೆ, ಈ ಅಂಕಿಸಂಖ್ಯೆ ಎಷ್ಟೊಂದು ಪ್ರಾಮಾಣಿಕವಾಗಿದೆ ಅನ್ನೋ ಪ್ರಶ್ನೆಯಿದೆ.




Leave a Reply

Your email address will not be published. Required fields are marked *

error: Content is protected !!