ನಾಳೆ ಚುನಾವಣಾ ದಿನಾಂಕ ಘೋಷಣೆ?

192

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜಕೀಯ ನಾಯಕರು ಮಾತ್ರವಲ್ಲ ರಾಜ್ಯದ ಜನರು ಸಹ ಎದುರು ನೋಡುತ್ತಿರುವುದು ಚುನಾವಣಾ ದಿನಾಂಕ ಯಾವಾಗ ಘೋಷಣೆ ಮಾಡುತ್ತಾರೆ ಎಂದು. ಮಾರ್ಚ್ ತಿಂಗಳು ಮುಗಿಯಲು ಬಂದಿದ್ದು ಜನರ ಕುತೂಹಲ ಹೆಚ್ಚಾಗಿದೆ. ಕೆಲ ಮೂಲಗಳ ಪ್ರಕಾರ ಮಾರ್ಚ್ 29ಕ್ಕೆ ಚುನಾವಣಾ ದಿನಾಂಕ ಘೋಷಣೆ ಸಾಧ್ಯತೆಯಿದೆ.

ಇನ್ನು ಕೆಲ ಮೂಲಗಳ ಪ್ರಕಾರ ಏಪ್ರಿಲ್ 5ಕ್ಕೆ ದಿನಾಂಕ ಘೋಷಿಸಬಹುದು ಎಂದು. 2018ರ ಚುನಾವಣೆಗೆ ಮಾರ್ಚ್ 27ರಂದು ದಿನಾಂಕ ಘೋಷಿಸಲಾಗಿತ್ತು. ಮೇ 12ರಂದು ಮತದಾನ, ಮೇ 15ಕ್ಕೆ ಫಲಿತಾಂಶ ಪ್ರಕಟಗೊಂಡಿತ್ತು. ಹೀಗಾಗಿ ಈ ವಾರ ಅಥವ ಏಪ್ರಿಲ್ ಮೊದಲ ವಾರದಲ್ಲಿ ದಿನಾಂಕ ಘೋಷಣೆಯಾಗುವುದು ಮಾತ್ರ ನಿಶ್ಚಿತ.

ಚುನಾವಣೆ ದಿನಾಂಕ ಯಾವಾಗ ಬೇಕಾದರೂ ಘೋಷಣೆಯಾಗಬಹುದು. ಎಲ್ಲದಕ್ಕೂ ಸಿದ್ಧ ಇರಿ ಎಂದು ಚುನಾವಣಾ ಆಯೋಗ ತಿಳಿಸಿದೆ. ಜಿಲ್ಲಾಧಿಕಾರಿಗಳು ಸಹ ನೌಕರರ ತಮ್ಮ ಕಾರ್ಯಕ್ಷೇತ್ರ ಬಿಟ್ಟು ಎಲ್ಲಿಯೂ ಹೋಗುವಂತಿಲ್ಲ. ಹೇಗಾನದರೂ ಇದ್ದರೆ ಜಿಲ್ಲಾಮಟ್ಟದ ಅಧಿಕಾರಿಗಳ ಗಮನಕ್ಕೆ ತರಬೇಕೆಂದು ಸೂಚನೆ ನೀಡಲಾಗಿದೆ.




Leave a Reply

Your email address will not be published. Required fields are marked *

error: Content is protected !!