ವಿಧಾನಸಭಾ ಚುನಾವಣೆ: ಒಂದೂವರೆ ಲಕ್ಷಕ್ಕೂ ಹೆಚ್ಚು ಕಾಪ್ ರೆಡಿ

111

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಸನೀಹ ಬಂದಿದೆ. ನಾಳೆ ಒಂದು ದಿನ ಕಳೆದರೆ ಸಾಕು ಮತದಾನ. ರಾಜ್ಯದ 224 ಮತಕ್ಷೇತ್ರಗಳಿಗೆ ಸಂಬಂಧಿಸಿದಂತೆ 58,282 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ 11,617 ಮತಗಟ್ಟೆಗಳು ಸೂಕ್ಷ್ಮ ಮತಗಟ್ಟೆಗಳಾಗಿವೆ.

ಚುನಾವಣೆ ಭದ್ರತೆಗಾಗಿ ಒಂದೂವರೆ ಲಕ್ಷಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. 304 ಡಿವೈಎಸ್‌ಪಿಗಳು, 991 ಇನಸ್ಪೆಕ್ಟರ್, 2,610 ಪಿಎಸ್‌ಐ, 5,803 ಎಎಸ್‌, 46,421 ಹೆಚ್‌ಸಿ ಹಾಗೂ ಪಿಸಿ 27,990 ಹೋಂ ಗಾರ್ಡ್ಸ್ ಸೇರಿ 84,119 ಮತ್ತು ಸಿಬ್ಬಂದಿ ನಿಯೋಜನೆಗೊಳಿಸಲಾಗಿದೆ. ಹೊರ ರಾಜ್ಯಗಳಿಂದ ಸುಮಾರು 8,500 ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿ ಹಾಗೂ ಗೃಹ ರಕ್ಷಕರನ್ನು ಕರೆಸಲಾಗಿದೆ. 650 ಸಿಎಪಿಎಫ್ ಪಡೆಗಳ ಜೊತೆಗೆ ರಾಜ್ಯ ಸಶಸ್ತ್ರ ಮೀಸಲು ಪಡೆ ಸಹ ಸಿದ್ಧವಾಗಿದೆ. ಒಟ್ಟು 1,56,000 ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿ ಚುನಾವಣೆ ಕರ್ತವ್ಯ ನಿರ್ವಹಿಸಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!