‘ಕಾಲೇಜಿನಲ್ಲಿ ವಿಡಿಯೋ ಪ್ರಕರಣ ಸುಳ್ಳು ಸುದ್ದಿ ಹಬ್ಬಿಸಿದರೆ ಕ್ರಮ’

126

ಪ್ರಜಾಸ್ತ್ರ ಸುದ್ದಿ

ಉಡುಪಿ: ಇಲ್ಲಿನ ಕಾಲೇಜುವೊಂದರಲ್ಲಿ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ವಿಡಿಯೋ ರೆಕಾರ್ಡ್ ಮಾಡಿ ಬೇರೆಯವರಿಗೆ ಹಂಚಿಕೊಳ್ಳಲಾಗುತ್ತಿತ್ತು ಅನ್ನೋ ಪ್ರಕರಣ ಸಂಬಂಧ, ಜಿಲ್ಲಾ ಪೊಲೀಸರು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಈ ಕುರಿತು ಯಾವುದೇ ರೀತಿಯ ಸುಳ್ಳು ಸುದ್ದಿ ಹಬ್ಬಿಸುವುದು, ಸೋಷಿಯಲ್ ಮೀಡಿಯಾದಲ್ಲಿ ಫಾವರ್ಡ್ ಮಾಡುವುದು ಕಂಡು ಬಂದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್ಪಿ ಅಕ್ಷಯ್ ಮಚ್ಚಿಂದ್ರ ಹೇಳಿದ್ದಾರೆ.

ಮಂಗಳವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಲು ಯಾವುದೇ ರೀತಿಯ ಸಾಕ್ಷ್ಯ ಸಿಕ್ಕಿಲ್ಲ. ಆರೋಪಿಗಳ ಮೊಬೈಲ್ ನಲ್ಲಿ ಯಾವುದೇ ರೀತಿಯ ಫೋಟೋ, ವಿಡಿಯೋ ಕಂಡು ಬಂದಿಲ್ಲ. ತಮಾಷೆಗಾಗಿ ಮಾಡಲಾಗಿದೆ ಎಂದು ಹುಡುಗಿಯರು ಹೇಳಿದ್ದಾರೆ. ಕಾಲೇಜುಗಳ ನಿಯಮದ ಪ್ರಕಾರ ತನಿಖೆ ನಡೆಸಿದ್ದು, ಈಗ ಬಿಟ್ಟಿರುವ ವಿಡಿಯೋ ನಕಲಿಯಾಗಿದೆ. ಸತ್ಯ ತಿಳಿಯದೆ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!