ಎಟಿಎಂ ಕಳ್ಳತನಕ್ಕೆ ಜೆಸಿಬಿ ತಂದ ಖತರ್ನಾಕ್ ಕಳ್ಳ

345

ಪ್ರಜಾಸ್ತ್ರ ಅಪರಾಧ ಸುದ್ದಿ

ಶಿವಮೊಗ್ಗ: ಎಟಿಎಂ ಕಳ್ಳತನ ಪ್ರಕರಣಗಳು ಆಗಾಗ ನಡೆಯುತ್ತಿರುವುದು ಕಂಡು ಬಂದಿದೆ. ಎಟಿಎಂ ಮಷಿನ್ ಹಿಂದಗಡೆ ಒಡೆದು ಕಳ್ಳತನ ಮಾಡುವುದು, ಧ್ವಂಸ ಮಾಡಿ ಕಳ್ಳತನ ಮಾಡುವುದು ನೋಡಿರುತ್ತೇವೆ. ಆದರೆ, ಇಲ್ಲೊಬ್ಬ ಖತರ್ನಾಕ್ ಕಳ್ಳ ಜೆಸಿಬಿ ತಂದು ಎಟಿಎಂ ಕಳ್ಳತನಕ್ಕೆ ಯತ್ನಿಸಿರುವು ಘಟನೆ ನಡೆದಿದೆ.

ವಿನೋಬನಗರದ ಮುಖ್ಯರಸ್ತೆಯಲ್ಲಿರುವ ಶಿವಾಲಯದ ದೇವಸ್ಥಾನದ ಎದುರಿನ ಆಕ್ಸಿಸ್ ಬ್ಯಾಂಕ್ ಎಟಿಎಂ ಕಳ್ಳತನ ಮಾಡಲು ಮಂಗಳವಾರ ರಾತ್ರಿ ಜೆಸಿಬಿ ತಂದು ಮುಂದಿನ ಗ್ಲಾಸ್ ಒಡೆದು ಎಟಿಎಂ ಪಡೆಯಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಬರುತ್ತಿರುವುದನ್ನು ನೋಡಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಎಟಿಎಂ ಕಳ್ಳತನಕ್ಕೆ ತಂದ ಜೆಸಿಬಿ ಸಹ ಕದ್ದು ತಂದಿರುವುದಾಗಿದೆ.

ಪಕ್ಕದ ಪೆಟ್ರೋಲ್ ಬಂಕ್ ನಲ್ಲಿ ನಿಲ್ಲಿಸಿದ್ದ ಜೆಸಿಬಿ ಕದ್ದು ತಂದು ಈ ರೀತಿ ಮಾಡಿದ್ದಾನೆ. ಪೊಲೀಸ್ ಠಾಣೆಗೆ ಜೆಸಿಬಿ ತರಲಾಗಿದೆ. ಪ್ರಕರಣ ದಾಖಲಿಸಿಕೊಂಡು ಇಂತಹ ಖತರ್ನಾಕ್ ಕಳ್ಳನ ಪತ್ತೆಗಾಗಿ ಪೊಲೀಸರು ಮುಂದಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!