ವರ್ಷದ ಕೊನೆಯಲ್ಲಿ ತೆರೆ ಕಂಡ 3 ಚಿತ್ರಗಳು: ಏನಾಗುತ್ತೆ ಲೆಕ್ಕಾಚಾರ?

589

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬೆಂಗಳೂರು: ಎಂಇಎಸ್ ಪುಂಡಾಟಿಕೆ ಖಂಡಿಸಿ ಇಂದು ಬಂದ್ ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದನ್ನು ನಿನ್ನೆ ಸಂಜೆ ವಾಪಸ್ ಪಡೆದ ಪರಿಣಾಮ, ಸಾಕಷ್ಟು ಟೆನ್ಷನ್ ನಲ್ಲಿದ್ದ ಗಾಂಧಿನಗರದ ಮಂದಿಗೆ ರಿಲ್ಯಾಕ್ಸ್ ಆಗಿದೆ. ಅಲ್ದೇ, ಅಂದುಕೊಂಡಂತೆ ಇಂದು ಮೂರು ಚಿತ್ರಗಳು ಬಿಡುಗಡೆಯಾಗಿವೆ.

ನಟ ಅಜಯ್ ರಾವ್, ರಚಿತಾ ರಾಮ್ ಜೋಡಿಯ ಲವ್ ಯೂ ರಚ್ಚು, ಪ್ರಜ್ವಲ್ ದೇವರಾಜ್, ಪ್ರಿಯಾಂಕಾ ನಟನೆಯ ಅರ್ಜುನ್ ಗೌಡ, ದಿಗಂತ, ಕವಿತಾಗೌಡ ನಟನೆಯ ಹುಟ್ಟು ಹಬ್ಬದ ಶುಭಾಶಯಗಳು ಅನ್ನೋ ಮೂರು ಚಿತ್ರಗಳು ತೆರೆ ಕಂಡಿವೆ. ಇವುಗಳನ್ನು ಮೊದಲ ಶೋ ನೋಡಿದ ಸಿನಿ ಪ್ರೇಕ್ಷಕರು ಏನು ಹೇಳುತ್ತಾರೆ ಹಾಗೂ ಮೊದಲ ದಿನದ ಕಲೆಕ್ಷನ್ ಏನಾಗಿರುತ್ತೆ ಅನ್ನೋದರ ಮೇಲೆ ಸೂಪರ್ ಹಿಟ್ ಆದ 2021ರ ಕೊನೆಯ ಚಿತ್ರ ಯಾವುದು ಎಂದು ನಿರ್ಧಾರವಾಗಲಿದೆ.

ಲವ್ ಯೂ ರಚ್ಚು ಚಿತ್ರದ ನಟ ಹಾಗೂ ನಿರ್ಮಾಪಕರ ನಡುವಿನ ಬಹಿರಂಗ ಜಗಳ ಚಿತ್ರಕ್ಕೆ ಎಷ್ಟು ಮೈನಸ್ ಆಗುತ್ತೆ? ಚಿತ್ರಕಥೆ ಜನರಿಗೆ ಇಷ್ಟವಾದರೆ ಎಷ್ಟು ಪ್ಲಸ್ ಆಗುತ್ತೆ ನೋಡಬೇಕಿದೆ. ಇನ್ನು ಅರ್ಜುನ್ ಗೌಡ ಚಿತ್ರ ತೆಲುಗಿನ ಅರ್ಜುನ್ ರೆಡ್ಡಿ ಚಿತ್ರದ ರಿಮೇಕ್. ಅದರಂತೆ ಇದು ಸೂಪರ್ ಹಿಟ್ ಆಗುತ್ತಾ? ಪ್ರಜ್ಜುಗೆ ಮತ್ತೆ ದೊಡ್ಡ ಮಟ್ಟದ ಸಕ್ಸಸ್ ಸಿಗುತ್ತಾ ತಿಳಿಯಬೇಕಿದೆ.

ಇನ್ನು ನಟ ದಿಂಗತ್ ನಟನೆಯ ಇತ್ತೀಚಿನ ಚಿತ್ರಗಳು ಯಾವುದೂ ಸಕ್ಸಸ್ ಆಗಿಲ್ಲ. ಮಾಸ್ ಹೀರೋ ಇಮೇಜ್ ಇಲ್ಲದ ಪರಿಣಾಮ, ಅವರ ಎಂದಿನ ಶೈಲಿಯ ಚಿತ್ರಗಳು ಸಹ ಕೈ ಹಿಡಿಯುತ್ತಿಲ್ಲ. ಇನ್ನು ಸ್ಯಾಂಡಲ್ ವುಡ್ ಡ್ರಗ್ಸ್ ವಿಚಾರದಲ್ಲಿ ತಾರಾ ದಂಪತಿ ದಿಗಂತ್ ಹಾಗೂ ಐಂದ್ರಿತಾ ಪೊಲೀಸ್ ವಿಚಾರಣೆ ಎದುರಿಸಿ ಬಂದಿದ್ದು, ದೊಡ್ಡ ಸುದ್ದಿಯಾಗಿತ್ತು. ಆದರೆ, ಇವರ ಚಿತ್ರಗಳು ಮಾತ್ರ ದೊಡ್ಡ ಸುದ್ದಿಯಾಗುತ್ತಿಲ್ಲ. ನಟಿ ಕವಿತಾಗೌಡ ಸಹ ಸ್ಮಾಲ್ ಸ್ಕ್ರೀನ್ ಜೊತೆಗೆ ಬಿಗ್ ಸ್ಕ್ರೀನ್ ಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದೂ ಗೆಲುವು ಸಿಕ್ಕಿಲ್ಲ. ಹೀಗಾಗಿ ಹುಟ್ಟು ಹಬ್ಬದ ಶುಭಾಶಯಗಳು ಇವರಿಬ್ಬರಿಗೂ ಮುಖ್ಯವಾಗಿದೆ. ಯಾರಿಗೆ ಎಷ್ಟು ಯಶಸ್ಸು ಸಿಗುತ್ತೆ ಕಾದು ನೋಡಬೇಕಿದೆ.




Leave a Reply

Your email address will not be published. Required fields are marked *

error: Content is protected !!