4-6 ಬಿಜೆಪಿ ಹಾಲಿ ಶಾಸಕರಿಗೆ ಟಿಕೆಟ್ ಮಿಸ್

168

ಪ್ರಜಾಸ್ತ್ರ ಸುದ್ದಿ

ಕಲಬುರಗಿ: ಪ್ರಸ್ತುತ ಈಗ ಎಲ್ಲಿ ನೋಡಿದರೂ ಚುನಾವಣೆಯ ಕಾವು. ಬೇಸಿಗೆ ಬಿಸಿಲಿನ ಕಾವಿನ ಜೊತೆಗೆ ಎಲೆಕ್ಷನ್ ಬಿಸಿ ಹೆಚ್ಚಾಗುತ್ತಿದೆ. ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಯಡಿಯೂರಪ್ಪ ಹೇಳಿದ ಮಾತು ಹೊಸ ಸಂಚಲನ ಸೃಷ್ಟಿಸಿದೆ. ಅದೇನು ಅಂದರೆ, ಈ ಬಾರಿಯ ಚುನಾವಣೆಯಲ್ಲಿ 4 ರಿಂದ 6 ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪಲಿದೆ ಎನ್ನುವುದು.

ಕಲಬುರಗಿಯಲ್ಲಿ ಮಾತನಾಡಿದ ಅವರು, ನಾಲ್ಕರಿಂದ ಆರು ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪಲಿದೆ. ಉಳಿದಂತೆ ಬಹುತೇಕ ಎಲ್ಲರಿಗೂ ಟಿಕೆಟ್ ಸಿಗಲಿದೆ ಎಂದು ಹೇಳಿದ್ದು, ಯಾರು 6 ಜನ ಶಾಸಕರು ಅನ್ನೋ ಪ್ರಶ್ನೆ ಮೂಡಿದೆ. ಈ ರಹಸ್ಯ ಸಂಖ್ಯೆಯಿಂದ ಎಲ್ಲ ಬಿಜೆಪಿ ಶಾಸಕರಲ್ಲಿ ಢವ ಢವ ಶುರುವಾಗಿದೆ.




Leave a Reply

Your email address will not be published. Required fields are marked *

error: Content is protected !!