ನಿಮ್ಮ ಮೊಬೈಲ್ ಕಳೆದು ಹೋದರೆ ಹೀಗೆ ಮಾಡಿ

230

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಇತ್ತೀಚಿನ ದಿನಮಾನಗಳಲ್ಲಿ ಮೊಬೈಲ್ ಕಳೆದುಕೊಳ್ಳುವುದಾಗಲಿ, ಕಳ್ಳತನ ಮಾಡುವುದಾಗಲಿ ಹೆಚ್ಚಾಗಿ ಆಗುತ್ತಿವೆ. ಇದರಿಂದಾಗಿ ಮೊಬೈಲ್ ಕಳೆದುಕೊಂಡವರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಯಾಕಂದರೆ, ಇಂದು ಎಲ್ಲದಕ್ಕೂ ಆನ್ಲೈನ್ ವ್ಯವಹಾರವಿದೆ. ಹೀಗಾಗಿಯೇ ಆನ್ಲೈನ್ ಮೂಲಕ ವಂಚನೆ ಮಾಡಲಾಗುತ್ತಿದೆ.

ನಿಮ್ಮ ಫೋನ್ ಕಳೆದು ಹೋಗಿದ್ದರೆ ಈ ರೀತಿ ಮಾಡಿ…

1 : ಮೊದಲಿಗೆ 8277952828 ಈ ನಂಬರ್‌ಗೆ ವಾಟ್ಸಾಪ್‌ನಲ್ಲಿ Hi ಎಂದು ಮೆಸೆಜ್‌ ಮಾಡಿ.

2 : ನೀವು ಮೆಸೆಜ್‌ ಕಳುಹಿಸಿದ ವಾಟ್ಸಾಪ್‌ ನಂಬರ್‌ಗೆ ಒಂದು ಲಿಂಕ್‌ ಬರುತ್ತದೆ.

3 : ಇಲ್ಲಿ ಕೇಳಲಾಗುವ ಅವಶ್ಯ ಮಾಹಿತಿಗಳನ್ನು ಭರ್ತಿ ಮಾಡಿ ಮತ್ತು Submit ಮಾಡಿರಿ.

4 : ಆ ನಂತರ ಕಳೆದುಹೋದ ಫೋನ್‌ ಪತ್ತೆಗೆ ಕ್ರಮ ಕೈಗೊಳ್ಳಲಾಗುವುದು.

5 : ಇನ್ನು ಪತ್ತೆಯಾಗದ ಫೋನ್‌ಗಳನ್ನು ಬ್ಲಾಕ್‌ ಮಾಡಲು ಕ್ರಮ ಕೈಗೊಳ್ಳಲಾಗುವುದು.

ನಿಮ್ಮ ಮೊಬೈಲ್ ನಂಬರ್ ಗೆ ಲಿಂಕ್ ಇರುವ ಬ್ಯಾಂಕ್ ಖಾತೆ, ಯುಪಿಐ ಸೇರಿ ಇತರೆ ಆನ್ಲೈನ್ ಸೇವೆಯನ್ನು ಕೂಡಲೇ ನಿಷ್ಕ್ರಿಯಗೊಳಿಸಿ. ಇದರಿಂದ ಡಿಜಿಟಲ್ ವಂಚನೆಯಿಂದ ತಪ್ಪಿಸಿಕೊಳ್ಳಬಹುದು. ಯಾಕಂದರೆ ನಿಮ್ಮ ಹಳೆಯ ನಂಬರಿನ ಹೊಸ ಸಿಮ್ ಪಡೆಯಲು ಸ್ವಲ್ಪ ಸಮಯಬೇಕು. ಈ ಬಗ್ಗೆ ಪೊಲೀಸ್ ಆಯುಕ್ತರು ಸಹ ಮಾಹಿತಿ ನೀಡಿದ್ದಾರೆ.

ಇತ್ತೀಚೆಹೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ ಹೊಸ ವ್ಯವಸ್ಥೆ ಜಾರಿಗೆ ತಂದಿದ್ದು, ಸುಮಾರು 3 ಲಕ್ಷ ಮೌಲ್ಯದ 30 ಮೊಬೈಲ್ ಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಪೊಲೀಸ್ ಇಲಾಖೆಯ ಈ ಹೊಸ ಯೋಜನೆಯಿಂದ ಕೆಲ ದಿನಗಳಲ್ಲೇ ನಿಮ್ಮ ಫೋನ್ ನಿಮಗೆ ಸಿಗಲಿದೆ.




Leave a Reply

Your email address will not be published. Required fields are marked *

error: Content is protected !!