ಸಾವಳಗಿಯಲ್ಲಿ ಕರೋನಾ ಸೋಂಕು

393

ಪ್ರಜಾಸ್ತ್ರ ಸುದ್ದಿ

ಜಮಖಂಡಿ: ತಾಲೂಕಿನ ಸಾವಳಗಿ ಗ್ರಾಮದ ತೆಲಸಂಗ ರಸ್ತೆಯಲ್ಲಿನ ಶಿಂಧೆ ತೋಟದ ವಸ್ತಿಯಲ್ಲಿ ಒಬ್ಬ ವ್ಯಕ್ತಿಗೆ ಕರೋನಾ ಸೋಂಕು ದೃಢಪಟ್ಟಿದೆ. ಹೀಗಾಗಿ ತೋಟದ ಮನೆಯ ಸುತ್ತುಮುತ್ತ ಡಿಟಿಡಿ ಪೌಡರ ಹಾಗೂ ಸ್ಯಾನಿಟೈಸರ್ ಸಿಂಪಡಿಸಿ ಸೀಲ್ ಡೌನ ಮಾಡಲಾಗಿದೆ.

ಈ ಬಗ್ಗೆ ಮಾತ್ನಾಡಿದ ಉಪತಶೀಲ್ದಾರ ವಾಯ್,ಎಚ್. ದ್ರಾಕ್ಷಿ, ಗ್ರಾಮದಲ್ಲಿ ಕರೋನಾ ಸೋಂಕಿತರು ಹೆಚ್ಚುತ್ತಿರುವದರಿಂದ ಗ್ರಾಮದ ಜನತೆ ಸುರಕ್ಷಿತವಾಗಿ ಇರುವುದು ಬಹಳ ಮುಖ್ಯ ಎಂದರು. ಇನ್ನು ಸಾವಳಗಿ ಪಿಡಿಓ ಗಿರೀಶ ಕಡಕೋಳ ಅವರು ಸಾಮಾಜಿಕ ಅಂತರ ಕಾಯ್ದುಕೋಳ್ಳುವದು, ಸ್ಯಾನಿಟೈಸರ್ ಬಳಕೆ, ಮಾಸ್ಕ್ ಅವಶ್ಯಕ. ಅನಗತ್ಯ ತಿರುಗಾಟ ನಿಲ್ಲಿಸಬೇಕೆಂದರು.

ಈ ಸಂದರ್ಭದಲ್ಲಿ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಪ್ರಕಾಶ ಹುಗ್ಗಿ, ಗ್ರಾಮ ಲೆಕ್ಕಾಧಿಕಾರಿ ಆನಂದ ರಾಠೋಡ, ಎಸೈ ಎಸ್.ಎಸ್.ಬೀಳಗಿ ಹಾಜರಿದ್ರು.




Leave a Reply

Your email address will not be published. Required fields are marked *

error: Content is protected !!