ಗುಮ್ಮಟನಗರಿಯಲ್ಲಿ ಒಂದೇ ವಾರದಲ್ಲಿ ಶೇ.10.9ರಷ್ಟು ಸೋಂಕು ಏರಿಕೆ

304

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಜಿಲ್ಲೆಯಲ್ಲಿ ಕರೋನಾ ಸೋಂಕಿತರ ಸಂಖ್ಯೆ ವೇಗವಾಗಿ ಹರಡುತ್ತಿದೆ. ಹೀಗಾಗಿ ಕಳೆದೊಂದು ವಾರದಲ್ಲಿಯೇ ಶೇಕಡ 10.9ರಷ್ಟು ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಈ ಮೂಲಕ ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.

ಜುಲೈ 11ರಂದು 758 ಪ್ರಕರಣಗಳಿದ್ವು. ಆದ್ರೆ, ಒಂದೇ ವಾರದಲ್ಲಿ 827 ಜನರಲ್ಲಿ ಸೋಂಕು ಪತ್ತೆಯಾಗಿ ಅದು 1,585ಕ್ಕೆ ಏರಿಕೆ ಕಂಡಿದೆ. ನಗರದ ವ್ಯಾಪ್ತಿಯಲ್ಲಿ ಶೇಕಡ 95ರಷ್ಟು ಸೋಂಕು ದೃಢಪಟ್ಟಿವೆ. ಸುಮಾರು 40 ಸಾವಿರ ಮಾದರಿಗಳನ್ನ ಕಳುಹಿಸಲಾಗಿದ್ದು, ಇದರಲ್ಲಿ 36,334 ನೆಗಟಿವ್ ಬಂದ್ರೆ 1,585 ಪಾಸಿಟಿವ್ ಇವೆ.

ಈ ಬಗ್ಗೆ ಮಾತ್ನಾಡಿರುವ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ, ಸೋಂಕಿತರ ವೇಗದ ಜೊತೆಗೆ ಗುಣಮುಖರಾಗ್ತಿರುವವರ ಸಂಖ್ಯೆ ಸಹ ಹೆಚ್ಚಿದೆ. ಹೀಗಾಗಿ ಶೇಕಡ 65ರಷ್ಟು ಜನ ಡಿಸ್ಚಾರ್ಜ್ ಆಗಿದ್ದು, ಸಾವಿನ ಪ್ರಮಾಣ ಶೇಕಡ 1.5ಕ್ಕಿಂತ ಕಡಿಮೆ ಇದೆ ಎಂದು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ 21 ಜನ ಸಾವನ್ನಪ್ಪಿದ್ದಾರೆ.




Leave a Reply

Your email address will not be published. Required fields are marked *

error: Content is protected !!