ಹುಲಿಗಣತಿ ಕರ್ನಾಟಕ ನಂಬರ್-2

401

ನವದೆಹಲಿ: ಇಂದು ವಿಶ್ವ ಹುಲಿ ದಿನಾಚರಣೆಯನ್ನ ಆಚರಿಸಲಾಗ್ತಿದೆ. ಈ ವೇಳೆ 2018ನೇ ಸಾಲಿನ ಹುಲಿಗಣತಿಯನ್ನ ಬಿಡುಗಡೆ ಮಾಡಲಾಯ್ತು. ನಾಲ್ಕನೇ ಹುಲಿಗಣತಿಯನ್ನ ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ರು. 2006ರಿಂದ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಹುಲಿಗಣತಿ ನಡೆಸಲಾಗ್ತಿದೆ.

ನಾಲ್ಕು ವರ್ಷಗಳ ಹೋಲಿಕೆ ಬಳಿಕ ಶೇಕಡ 33ರಷ್ಟು ಹುಲಿ ಸಂತತಿ ಬೆಳದಿದೆ ಅನ್ನೋದು ತಿಳಿದು ಬಂದಿದೆ. ದೇಶದಲ್ಲಿ ಒಟ್ಟು 2,967 ಹುಲಿಗಳಿವೆ. ನಾಲ್ಕು ವರ್ಷಗಳಲ್ಲಿ 741 ಹುಲಿಗಳು ಹೆಚ್ಚಿವೆ ಅನ್ನೋದು ಈ ವರದಿಯಿಂದ ತಿಳಿದಿದೆ. ಮಧ್ಯಪ್ರದೇಶದಲ್ಲಿ 526 ಹುಲಿಗಳಿದ್ದು ದೇಶದಲ್ಲಿ ಪ್ರಥಮ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ 524 ಹುಲಿಗಳಿದ್ದು ಎರಡನೇ ಸ್ಥಾನದಲ್ಲಿದೆ. ಉತ್ತರಾಖಂಡದಲ್ಲಿ 442 ಹುಲಿಗಳಿವೆ.

ಕಳೆದ ಹುಲಿಗಣತಿಯಲ್ಲಿ ಕರ್ನಾಟಕ ನಂಬರ್ ಒನ್ ಇತ್ತು. 2014ರ ಹುಲಿಗಣತಿಯಲ್ಲಿ ರಾಜ್ಯದಲ್ಲಿ 406 ಹುಲಿಗಳಿದ್ವು. ಉತ್ತಾರಾಖಂಡದಲ್ಲಿ 340 ಹಾಗೂ ಮಧ್ಯಪ್ರದೇಶದಲ್ಲಿ 308 ಹುಲಿಗಳಿದ್ವು. ನಾಲ್ಕು ವರ್ಷಗಳಲ್ಲಿ ಮಧ್ಯಪ್ರದೇಶ ಕರ್ನಾಟಕವನ್ನ ಹಿಂದಿಕ್ಕಿದೆ. ಈ ಬೆಳವಣಿಗೆ ದೇಶದಲ್ಲಿ ಸಂತಸವನ್ನ ತಂದಿದೆ. ಪ್ರತಿಯೊಬ್ಬರು ಈ ಬಗ್ಗೆ ಖುಷಿಯನ್ನ ವ್ಯಕ್ತಪಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!