ಟೋಬಿ ಚಿತ್ರ ಚೆನ್ನಾಗಿಲ್ಲವೆಂದ ಹುಡುಗಿಗೆ ಹೀಗಾ ಮಾಡೋದು?

252

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಶುಕ್ರವಾರ ರಿಲೀಸ್ ಆದ ಟೋಬಿ ಚಿತ್ರದ ನೋಡಿದ ಹುಡುಗಿ ಚೆನ್ನಾಗಿಲ್ಲವೆಂದು ತನ್ನ ಅಭಿಪ್ರಾಯ ಹೇಳಿದ್ದೇ ತಡ ಅಲ್ಲಿದ್ದ ಕೆಲವರು ಆಕೆಗೆ ಬಾಯಿಗೆ ಬಂದಂತೆ ಬೈದಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

ಮೈಸೂರಿನ ಸಂಗಮ್ ಥಿಯೇಟರ್ ನಲ್ಲಿ ಸಿನಿಮಾ ನೋಡಿ ಹೊರ ಬಂದ ಯುವತಿಗೆ ಯುಟ್ಯೂಬ್ ಚಾನಲ್ ದವರು ಪ್ರಶ್ನೆ ಕೇಳಿದಾಗ ಸಿನಿಮಾ ಚೆನ್ನಾಗಿಲ್ಲ ಎಂದಿದ್ದಾಳೆ. ಇಷ್ಟಕ್ಕೆ ಅಲ್ಲಿದ್ದ ಒಬ್ಬ ಆಕೆಗೆ ಕೆಟ್ಟದಾಗಿ ಬೈದಿದ್ದಾನೆ. ಇದನ್ನು ಅಲ್ಲಿದ್ದವರು ನೋಡುತ್ತಾ ನಿಂತುಕೊಂಡಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಥಿಯೇಟರ್ ಮ್ಯಾನೇಜರ್ ಯುವತಿಯನ್ನು ಅಲ್ಲಿಂದ ಕಳಿಸಿ, ಚಿತ್ರ ಚನ್ನಾಗಿದೆ. ಆಕೆ ಡ್ರಗ್ಸ್ ಅಡಿಕ್ಟ್ ಅನಿಸುತ್ತೆ ಎಂದು ಆರೋಪಿಸಿದ್ದಾನೆ.

ಒಬ್ಬ ನಟ, ನಿರ್ದೇಶಕನ ಈ ಹಿಂದಿನ ಹಿಟ್ ಸಿನಿಮಾ ನೋಡಿದ ಸಿನಿ ಪ್ರೇಕ್ಷಕರಿಗೆ ಮುಂದಿನ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿಗೆ ಇರುತ್ತೆ. ಆದರೆ ನಿರೀಕ್ಷೆ ಸುಳ್ಳಾದಾಗ ಅವರು ತಮ್ಮ ಅಭಿಪ್ರಾಯವನ್ನು ಹೇಳುತ್ತಾರೆ. ಹಣ ಕೊಟ್ಟು ಸಿನಿಮಾ ನೋಡುವ ಪ್ರತಿಯೊಬ್ಬರಿಗೂ ಅವರವರ ಅಭಿಪ್ರಾಯ ಹೇಳುವ ಸ್ವಾತಂತ್ರ್ಯವಿದೆ. ಎಲ್ಲರೂ ಚೆನ್ನಾಗಿದೆ ಎಂದು ಹೇಳಬೇಕು ಅಂತಾ ಬಯಸೋದ್ಯಾಕೆ? ಹೆದರಿಸಿ, ಬೆದರಿಸಿ ಅವರ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಅನೇಕರು ಆಕ್ರೋಶ ಹೊರ ಹಾಕುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!