ರಾಜ್ಯದಲ್ಲಿ ಇಂದು 25 ಸಾವಿರಕ್ಕೂ ಹೆಚ್ಚು ಕೋವಿಡ್ ಪ್ರಕರಣ

371

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 25005 ಕೋವಿಡ್ ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 31,24,524ಕ್ಕೆ ಏರಿಕೆಯಾಗಿದೆ. ಇಂದು ಹೊಸದಾಗಿ 8 ಜನರು ಪ್ರಾಣ ಕಳೆದುಕೊಂಡಿದ್ದು, ಸಾವಿನ ಸಂಖ್ಯೆ 38,397ಕ್ಕೆ ಏರಿಕೆಯಾಗಿದೆ.

ಇಂದು 2,363 ಜನರು ಡಿಸ್ಚಾರ್ಜ್ ಆಗಿದ್ದು 29,70,365 ಜನರು ಚೇತರಿಸಿಕೊಂಡಿದ್ದಾರೆ. ಇನ್ನು 1,15,733 ಪ್ರಕರಣಗಳು ಸಕ್ರಿಯವಾಗಿವೆ. ಬೆಂಗಳೂರು ನಗರ 18,374 ಪ್ರಕರಣಗಳು ದಾಖಲಾಗಿವೆ. ಮೈಸೂರು 695, ದಕ್ಷಿಣ ಕನ್ನಡ 625, ತುಮಕೂರು 547, ಹಾಸನ 490, ಮಂಡ್ಯ 406, ಧಾರವಾಡ 399, ಬೆಂಗಳೂರು ಗ್ರಾಮಾಂತರ 390, ಉಡುಪಿ 379, ಕಲಬುರಗಿ 346 ಸೋಂಕಿತರು ಪತ್ತೆಯಾಗಿದ್ದು, ಅತಿ ಹೆಚ್ಚು ಸೋಂಕು ಕಾಣಿಸಿಕೊಂಡ ಜಿಲ್ಲೆಗಳಾಗಿವೆ. ಬಾಗಲಕೋಟೆಯಲ್ಲಿ 5 ಸೋಂಕಿತರು ಪತ್ತೆಯಾಗಿದ್ದು, ತುಂಬಾ ಸುರಕ್ಷಿತವಾಗಿದೆ.




Leave a Reply

Your email address will not be published. Required fields are marked *

error: Content is protected !!