ವಾರಂತ್ಯದ ಕರ್ಫ್ಯೂಗೆ ಜವಳಿ, ಹೋಟೆಲ್, ಬಾರ್ ಮಾಲೀಕರ ಸಂಘದ ವಿರೋಧ

419

ಪ್ರಜಾಸ್ತ್ರ ಸುದ್ದಿ

ಬೆಂಗಳೂರು/ಹುಬ್ಬಳ್ಳಿ: ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ. ಈ ವೇಳೆ ತರಕಾರಿ, ಕಿರಾಣಿ, ಹಾಲು, ಮೊಸರು, ಮಾಂಸದಂಗಡಿ, ಕೃಷಿ ಉತ್ಪನ್ನ ಮಾರಾಟ ಸೇರಿದಂತೆ ಕೆಲವೊಂದಿಷ್ಟು ವ್ಯಾಪಾರಕ್ಕೆ ಪರವಾನಿಗೆ ನೀಡಲಾಗಿದೆ.

ಇದೀಗ ವೀಕೆಂಡ್ ಕರ್ಫ್ಯೂ ವೇಳೆ ಹೋಟೆಲ್, ರೆಸ್ಟೋರೆಂಟ್, ಬಾರ್, ಜವಳಿ ಉದ್ಯಮ ಬಂದ್ ಮಾಡುವಂತೆ ಹೇಳುತ್ತಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಎರಡು ವರ್ಷಗಳಿಂದ ಉದ್ಯಮವಿಲ್ಲದೆ ನಷ್ಟದಲ್ಲಿದ್ದೇವೆ. ಕೆಲವರಿಗೊಂದು ನಿಯಮ. ನಮಗೊಂದು ನಿಯಮ ಅಂದರೆ ಹೇಗೆ ಅನ್ನೋ ಪ್ರಶ್ನೆ ಎದ್ದಿದೆ.

ಕರ್ನಾಟಕ ವಾಣಿಜೋದ್ಯಮ ಸಂಸ್ಥೆಯ ನೂತನ ಅಧ್ಯಕ್ಷ ವಿನಯ.ಜೆ ಮಾತನಾಡಿ, ಎರಡು ವರ್ಷಗಳಿಂದ ಜವಳಿ ಉದ್ಯಮ ನಡೆಯದೆ ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ. ಕೋವಿಡ್ ಹೆಚ್ಚಿರುವ ಜಿಲ್ಲೆಗಳಲ್ಲಿ ವಾರಂತ್ಯದ ಕರ್ಫ್ಯೂ ವಿಧಿಸಬೇಕು. ಎಲ್ಲ ಜಿಲ್ಲೆಗಳಲ್ಲಿ ಇದರ ಅಗತ್ಯವಿಲ್ಲ. ನಮಗೂ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಬೇಕು ಎಂದಿದ್ದಾರೆ.

ಇನ್ನು ಹೋಟೆಲ್, ಬಾರ್ ಮಾಲೀಖರ ಸಂಘದವರು ಕಿಡಿ ಕಾರಿದ್ದಾರೆ. ವೀಕೆಂಡ್ ಕರ್ಫ್ಯೂ ವೇಳೆ ನಾವು ಹೋಟೆಲ್ ಓಪನ್ ಮಾಡುತ್ತೇವೆ ಎಂದು ಹೇಳಿದ್ದಾರೆ. ಈ ಮೂಲಕ ವೀಕೆಂಡ್ ಕರ್ಫ್ಯೂ ವೇಳೆ ತಮಗೂ ವ್ಯಾಪಾರ ಮಾಡಲು ಅವಕಾಶ ನೀಡಬೇಕು ಎಂದು ಕೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!