ವೀಕೆಂಡ್ ಕರ್ಫ್ಯೂ ರದ್ದಾಗುತ್ತಾ?

229

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಓಮಿಕ್ರಾನ್ ಸೋಂಕು ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಳೆದ ಎರಡು ವಾರಗಳಿಂದ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ. ಆದರೆ, ಅದು ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ತರ ಇದೆ. ಹೀಗಾಗಿ ವಿಪಕ್ಷದವರ ಜೊತೆಗೆ ಆಡಳಿತ ಪಕ್ಷದ ಕೆಲವರು ಕರ್ಫ್ಯೂಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದಾಗಿ ನಾಳೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ.

ನಾಳೆ ನಡೆಯುವ ಸಭೆಯಲ್ಲಿ ವೀಕೆಂಡ್ ಕರ್ಫ್ಯೂ ರದ್ದು ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಜನರಿಗೆ ಇದರಿಂದಾಗುತ್ತಿರುವ ಸಮಸ್ಯೆಯ ಬಗ್ಗೆ ಮಾಹಿತಿ ಪಡೆಯಲಾಗಿದ್ದು, ಕರ್ಫ್ಯೂ ಬದಲು ಇನ್ನಷ್ಟು ಕಟ್ಟುನಿಟ್ಟನ ಕ್ರಮಗಳನ್ನು ಏನು ತೆಗೆದುಕೊಳ್ಳಬಹುದು. ಇಡೀ ರಾಜ್ಯಕ್ಕೆ ಕರ್ಫ್ಯೂ ವಿಧಿಸುವ ಬದಲು ಎಲ್ಲಿ ಸೋಂಕು ಹೆಚ್ಚಾಗಿವೆಯೋ ಅಲ್ಲಿ ಮಾತ್ರ ವಿಧಿಸಿದರೆ ಹೇಗೆ ಅನ್ನೋದು ಸೇರಿದಂತೆ ಹಲವು ವಿಚಾರಗಳನ್ನು ತಜ್ಞರ ಜೊತೆಗೆ ಚರ್ಚಿಸಿ ನಾಳೆ ಮಧ್ಯಾಹ್ನ ತೀರ್ಮಾನಕ್ಕೆ ಬರುವ ಸಾಧ್ಯತೆಯಿದೆ.




Leave a Reply

Your email address will not be published. Required fields are marked *

error: Content is protected !!