ತಳವಾರ ಎಸ್ಟಿ ವಿಚಾರ: ಸಿಎಂಗೆ ಪ್ರತಿಭಟನೆ ಬಿಸಿ

420

ಪ್ರಜಾಸ್ತ್ರ ಸುದ್ದಿ

ಕಲಬುರಗಿ: ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಬಂದಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ತಳವಾರ, ಪರಿವಾರ ಎಸ್ಟಿ ಪ್ರಮಾಣ ಪತ್ರಕ್ಕಾಗಿ ಹೋರಾಟ ಮಾಡುತ್ತಿರುವವರಿಂದ ಪ್ರತಿಭಟನೆ ಬಿಸಿ ತಟ್ಟಿದೆ.

ಸರ್ದಾರ್ ವಲ್ಲಾಭಾಯ್ ಪಟೇಲ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಜನರನ್ನುದ್ದೇಶಿಸಿ ಸಿಎಂ ಮಾತನಾಡಬೇಕಿತ್ತು. ಆದರೆ, ತಳವಾರ ಸಮಾಜದವರ ಕಪ್ಪು ಬಟ್ಟೆ ಪ್ರದರ್ಶನದಿಂದಾಗಿ ಭಾಷಣವನ್ನು ಮೊಟಕುಗೊಳಿಸಲಾಯಿತು. ಅಲ್ಲಿಂದ ಪರೇಡ್ ಮೈದಾನದತ್ತ ತೆರಳುತ್ತಿದ್ದಾಗ, ಪ್ರತಿಭಟನಾಕಾರರು ಧಿಕ್ಕಾರ ಕೂಗಿದರು.

ಪೊಲೀಸರು ಪ್ರತಿಭಟನಾಕಾರರನ್ನು ವಾಹನದೊಳಗೆ ಬಲವಂತದಿಂದ ಕುಳಿತುಕೊಳ್ಳುವಂತೆ ಮಾಡಿದರು. ಈ ವೇಳೆ ಕಿಟಕಿಯಿಂದ ಹೊರಗೆ ಇಣುಕಿ ಧಿಕ್ಕಾರ ಕೂಗಿದರು. ಹೀಗಾಗಿ ಸಂಚಾರಕ್ಕೆ ಅಡ್ಡಿಯಾದಾಗ ಸಿಎಂ ಕಾರು ನಿಧಾನವಾಗಿ ಚಲಿಸುತಿತ್ತು. ಆಗ ಜನರ ಮಧ್ಯದಿಂದ ಬಂದ ಸಮಾಜದ ಮುಖಂಡರೊಬ್ಬರು ಸಿಎಂ ಕಾರಿನೊಳಗೆ ಮನವಿ ಪತ್ರವನ್ನು ಎಸೆದ ಘಟನೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!