ವೀಕೆಂಡ್ ಕರ್ಫ್ಯೂ ರದ್ದು: ಇರಲಿ ಸ್ವಯಂ ಎಚ್ಚರ

210

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸಾರ್ವಜನಿಕರು ಹಾಗೂ ರಾಜಕಾರಣಿಗಳ ವಿರೋಧದಿಂದಾಗಿ ರಾಜ್ಯದಲ್ಲಿ ಜಾರಿಗೆ ತಂದಿದ್ದ ವೀಕೆಂಡ್ ಕರ್ಫ್ಯೂ ರದ್ದುಗೊಳಿಸಲಾಗಿದೆ. ಆದರೆ, ನೈಟ್ ಕರ್ಫ್ಯೂ ಮುಂದುವರೆಸಲಾಗಿದೆ. ವೀಕೆಂಡ್ ಕರ್ಫ್ಯೂ ಇಲ್ಲ ಎಂದು ಜನರು ಮೈ ಮರೆತು ನಡೆದುಕೊಳ್ಳಬಾರದು. ಓಮಿಕ್ರಾನ್ ಸೋಂಕು ಸಹ ನಿಮ್ಮನ್ನು ಹಿಂಡಿ ಹಿಪ್ಪೆ ಮಾಡಿಬಿಡುತ್ತೆ.

ಹೊರಗಡೆ ಹೋದಾಗ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಿ. ಸಭೆ, ಸಮಾರಂಭಗಳಲ್ಲಿ ಸಾಧ್ಯವಾದಷ್ಟು ಸಾಮಾಜಿಕ ಅಂತರ ಕಾಪಾಡಿ. ಕೆಮ್ಮು, ನೆಗಡಿ, ಜ್ವರದ ಲಕ್ಷಣಗಳು ಇದ್ದವರು ಈ ಬಗ್ಗೆ ಗಮನ ಹರಿಸಿ. ಮಾಸ್ಕ್ ಹಾಕಿಕೊಳ್ಳಲು ನಿಮ್ಮ ಸುತ್ತಮುತ್ತಲಿನ ಜನಕ್ಕೂ ಹೇಳಿ. ಎಚ್ಚರಿಕೆ ಇಲ್ಲದೆ ಹೋದರೆ ಓಮಿಕ್ರಾನ್ ಸೋಂಕಿನ ನೋವು ಅನುಭವಿಸಬೇಕಾಗುತ್ತೆ ಹುಷಾರ್.




Leave a Reply

Your email address will not be published. Required fields are marked *

error: Content is protected !!