ನಾಳೆ ಲೈಟ್ ಆಫ್ ಮಾಡುವ ಮೊದ್ಲು ಎಲ್ಲರೂ ಇದನ್ನ ತಪ್ಪದೆ ಓದಿ…

517

ಬೆಂಗಳೂರು: ಕರೋನಾ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ನಾಳೆ ರಾತ್ರಿ 9 ಗಂಟೆಗೆ ಲೈಟ್ ಆಫ್ ಮಾಡಿ ದೀಪ ಬೆಳಗಲು ಕರೆ ನೀಡಿದ್ದಾರೆ. ದೇಶದ ಜನತೆ ಕರೋನಾ ವಿರುದ್ಧ ಒಗ್ಗಟ್ಟಾಗಿದೆ ಅನ್ನೋದರ ಸಲುವಾಗಿ ದೀಪ ಬೆಳಗಿ ಕರೋನಾ ಓಡಿಸಿ ಎಂದಿದ್ದಾರೆ.

ಪ್ರಧಾನಿ ಮೋದಿ ಕರೆಯಂತೆ ನಾಳೆ ದೇಶ್ಯಾದ್ಯಂತ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಲೈಟ್ ಆಫ್ ಮಾಡಿ ಒಗ್ಗಟ್ಟು ಪ್ರದರ್ಶನಕ್ಕೆ ರೆಡಿಯಾಗಿದ್ದಾರೆ. ಆದ್ರೆ, ಈ ವೇಳೆ ಒಂದಿಷ್ಟು ವಿಚಾರಗಳನ್ನ ಯಾರೂ ಮರೆಯಬಾರದು. ಏಕಕಾದಲ್ಲಿ ದೇಶ್ಯಾದ್ಯಂತ ಲೈಟ್ ಆಫ್ ಮಾಡುವುದ್ರಿಂದ​ ಹಾಗೂ ವಿದ್ಯುತ್​ ಉಪಕರಣಗಳನ್ನ ಸ್ಚಿಚ್ ಆಫ್ ಮಾಡಿದ್ರೆ, ವೋಲ್ಟೇಜ್ ಏರಿಳಿತ ಸಂಭವಿಸುತ್ತೆ ಅನ್ನೋ ಆತಂಕ ಎದುರಾಗಿತ್ತು.

ಈ ವಿಚಾರವಾಗಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ(KPTCL)ದಿಂದ ಪ್ರಕಟಣೆ ಹೊರಡಿಸಲಾಗಿದೆ. ಮಾರ್ಚ್​ 5ರ ರಾತ್ರಿ 9 ಗಂಟೆಗೆ ಎಲ್ಲಾ ಲೈಟ್​ಗಳ​ ಆಫ್​ ಮಾಡುವಂತೆ ಸೂಚಿಸಿದ್ದಾರೆ. ಇದನ್ನು ಹೊರತುಪಡಿಸಿ ಇನ್ನಿತರ ಎಲೆಕ್ಟ್ರಿಕಲ್ ಉಪಕರಣಗಳಾದ ರೆಫ್ರಿಜರೇಟರ್​, ಎಸಿ, ಟಿವಿ ಹಾಗೂ ಫ್ಯಾನ್​ಗಳನ್ನ ಆನ್​ನಲ್ಲಿರುವಂತೆ ನೋಡಿಕೊಳ್ಳಿ. ಆಗ ಯಾವುದೇ ವೋಲ್ಟೇಜ್​ ಏರಿಳಿತವಾಗಿ ಗ್ರಿಡ್​ನಲ್ಲಿ ಅಸ್ಥಿರತೆ ಆಗೋದಿಲ್ಲ.

ಹೀಗಾಗಿ 9 ಗಂಟೆಯ ವೇಳೆಗೆ ಬಲ್ಬ್​ಗಳನ್ನ ಹೊರತುಪಡಿಸಿ ಇನ್ನಿತರ ಎಲೆಕ್ಟ್ರಿಕಲ್ ಉಪಕರಣಗಳನ್ನು ಆನ್​ನಲ್ಲಿಡಿ ಅಂತ KPTCL ರಾಜ್ಯದ ಜನರಲ್ಲಿ ಮನವಿ ಮಾಡಿದೆ. ಇಂದು ನ್ಯಾಷನಲ್​ ಲೋಡ್ ಡಿಸ್ಪ್ಯಾಚ್ ಸೆಂಟರ್​, ಸ್ಥಳೀಯ ಲೋಡ್ ಡಿಸ್ಪ್ಯಾಚ್ ಸೆಂಟರ್ ಹಾಗೂ ಎಲ್ಲಾ ರಾಜ್ಯಗಳ ಲೋಡ್ ಡಿಸ್ಪ್ಯಾಚ್ ಸೆಂಟರ್​ನ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್​ ಮೂಲಕ ಸಭೆ ನಡೆಸಿ ಗ್ರಿಡ್ ಸೆಕ್ಯೂರಿಟಿ ಬಗ್ಗೆ ಚರ್ಚೆ ನಡೆಸಲಾಗಿದೆ.

ಈ ವೇಳೆ ವೋಲ್ಟೇಜ್​ ಏರಿಳಿತಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಲು ನ್ಯಾಷನಲ್​ ಲೋಡ್ ಡಿಸ್ಪ್ಯಾಚ್ ಸೆಂಟರ್ ಅಧಿಕಾರಿಗಳು, ಎಲ್ಲಾ ರಾಜ್ಯದ ವಿದ್ಯುತ್​ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅದರನ್ವಯ ಆಸ್ಪತ್ರೆಗಳು ಹಾಗೂ ಇನ್ನಿತರ ಅಗತ್ಯ ಕೇಂದ್ರಗಳಲ್ಲಿ ಲೈಟ್​ಗಳು ಆನ್​ ಇರಲಿವೆ. ಬೀದಿ ದೀಪಗಳು ಕೂಡ ಆನ್​ ಇರಲಿವೆ ಎಂದು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!