ಟೆಸ್ಟ್ ನಲ್ಲಿ ಪಂತ್, ಬೂಮ್ರಾ.. ಏಕದಿನದಲ್ಲಿ ಅಯ್ಯರ್, ಸಿರಾಜ್ ಬೆಸ್ಟ್

188

ಪ್ರಜಾಸ್ತ್ರ ಕ್ರೀಡಾ ಸುದ್ದಿ

2022ನೇ ಸಾಲಿನ ಕ್ರೀಡೆಯಲ್ಲಿ ಟೀಂ ಇಂಡಿಯಾದ ನಾಲ್ವರು ಆಟಗಾರರಿಗೆ ಬಿಸಿಸಿಐ ಬೆಸ್ಟ್ ಪರ್ಫಾರ್ಮೆನ್ಸ್ ಗರಿ ನೀಡಲಾಗಿದೆ. ಟೆಸ್ಟ್ ನಲ್ಲಿ ರಿಷಬ್ ಪಂತ್, ಜಸ್ ಪ್ರೀತ್ ಬೂಮ್ರಾ, ಏಕದಿನದಲ್ಲಿ ಶ್ರೇಯಸ್ ಅಯ್ಯರ್, ಮೊಹಮ್ಮದ್ ಸಿರಾಜ್ ಈ ಗೌರವಕ್ಕೆ ಭಾಜನರಾಗಿದ್ದಾರೆ.

ಪಂತ್ 2022ರಲ್ಲಿ 7 ಟೆಸ್ಟ್ ಪಂದ್ಯಗಳಲ್ಲಿ 680 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕ, 4 ಅರ್ಧ ಶತಕಗಳಿವೆ. 146 ಗರಿಷ್ಟ ಸ್ಕೋರ್ ಆಗಿದೆ. ಬೂಮ್ರಾ 5 ಪಂದ್ಯಗಳಲ್ಲಿ 22 ವಿಕೆಟ್ ಕಬಳಿಸಿದ್ದಾರೆ. 24 ರನ್ ಗಳಿಗೆ 5 ವಿಕೆಟ್ ಬೆಸ್ಟ್ ಬೌಲಿಂಗ್ ಆಗಿದೆ. 2 ಸಾರಿ 5 ವಿಕೆಟ್ ಪಡೆದಿದ್ದಾರೆ.

ಇನ್ನು ಏಕದಿನ ಪಂದ್ಯಗಳಲ್ಲಿ ಶ್ರೇಯಸ್ ಅಯ್ಯರ್ 17 ಪಂದ್ಯವಾಡಿ 724 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ, 6 ಅರ್ಧಶತಕಗಳಿವೆ. 113 ಗರಿಷ್ಟ ಸ್ಕೋರ್ ಆಗಿದೆ. ಮೊಹಮ್ಮದ್ ಸಿರಾಜ್ 15 ಪಂದ್ಯವಾಡಿ 24 ವಿಕೆಟ್ ಪಡೆದಿದ್ದು, 29 ರನ್ ಗಳಿಗೆ 3 ವಿಕೆಟ್ ಪಡೆದಿದ್ದು ಬೆಸ್ಟ್ ಬೌಲಿಂಗ್ ಆಗಿದೆ.




Leave a Reply

Your email address will not be published. Required fields are marked *

error: Content is protected !!