ಜನಸಾಮಾನ್ಯರಿಗೆ ಶಾಕ್: ರೈಲ್ವೆ ಪ್ಲಾಟ್ ಫಾರಂ ಟಿಕೆಟ್ ಶುಲ್ಕ ತ್ರಿಬಲ್ ಏರಿಕೆ

300

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ದೇಶದ ಶೇಕಡ 70ಕ್ಕಿಂತ ಹೆಚ್ಚು ಜನರು ಬಳಸುವುದು ರೈಲ್ವೆ ಸೇವೆಯನ್ನ. ದೂರದ ಪ್ರಯಾಣಕ್ಕೆ ಯೋಗ್ಯ ಹಾಗೂ ಕಡಿಮೆ ದರ ಅನ್ನೋ ಕಾರಣಕ್ಕೆ. ಹೀಗಾಗಿ ಸಹಜವಾಗಿಯೇ ಪ್ರಯಾಣ ಮಾಡುವರ ಜೊತೆ ಕುಟುಂಬಸ್ಥರು, ಸ್ನೇಹಿತರು, ಸಂಬಂಧಿಕರು ರೈಲು ನಿಲ್ದಾಣಕ್ಕೆ ಬಂದಿರ್ತಾರೆ. ಇವರಿಗೆ ಈ ಮೊದ್ಲು ಪ್ಲಾಟ್ ಫಾರಂ ಟಿಕೆಟ್ 10 ರೂಪಾಯಿ ಇತ್ತು.

ಇದೀಗ ಕೇಂದ್ರ ಸರ್ಕಾರ ರೈಲ್ವೆ ನಿಲ್ದಾಣಗಳ ಪ್ಲಾಟ್ ಫಾರಂ ಟಿಕೆಟ್ ದರ 50 ರೂಪಾಯಿಗೆ ಏರಿಕೆ ಮಾಡಿದೆ. ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ 11 ರೈಲು ನಿಲ್ದಾಣಗಳಲ್ಲಿ ಇಂದಿನಿಂದ ಪ್ಲಾಟ್ ಫಾರಂ ಟಿಕೆಟ್ ದರ 50 ರೂಪಾಯಿಗೆ ಏರಿಕೆಯಾಗಿದೆ. ಅಲ್ಲಿಗೆ ಪ್ರಯಾಣಿಕರನ್ನ ಬಿಡಲು ರೈಲು ನಿಲ್ದಾಣಕ್ಕೆ ಬರುವವರ ಜೇಬಿಗೆ ಕತ್ತರಿ ಬೀಳಲಿದೆ.

ಕೆ.ಆರ್ ಪುರಂ, ಬಂಗಾರಪೇಟೆ, ಹೊಸೂರು, ಕೆಂಗೇರಿ, ಯಲಹಂಕ, ಬಾಣಸ್ವಾಡಿ, ವೈಟ್ ಫಿಲ್ಡ್, ತುಮಕೂರು, ಮಂಡ್ಯ, ಹಿಂದೂಪುರ, ಪೆನುಕೊಂಡ ರೈಲು ನಿಲ್ದಾಣಗಳಲ್ಲಿ ಅಕ್ಟೋಬರ್ 21 ರಿಂದ ಪ್ಲಾಟ್ ಫಾರಂ ಟಿಕೆಟ್ ದರ 50 ರೂಪಾಯಿಗೆ ಏರಿಸಲಾಗಿದೆ. ಇದು ನವೆಂಬರ್ 10ರ ತನಕ ಎಂದು ಹೇಳಲಾಗ್ತಿದೆ. ಆದ್ರೆ, ನವೆಂಬರ್ 10ರ ನಂತರ ಇದೆ ಶುಲ್ಕ ಮುಂದುವರೆಯುವುದಿಲ್ಲ ಅನ್ನೋದಕ್ಕೆ ಯಾವುದೇ ಗ್ಯಾರೆಂಟಿ ಇಲ್ಲ.




Leave a Reply

Your email address will not be published. Required fields are marked *

error: Content is protected !!