ಉಳಿದ ಇಡ್ಲಿ ಬಿಸಾಡ್ಬೇಡಿ.. ಗರಿಗರಿ ಪಕೋಡಾ ಮಾಡಬಹುದು

308

ಪ್ರಜಾಸ್ತ್ರ ಲೈಫ್ ಸ್ಟೈಲ್

ಸಾಮಾನ್ಯವಾಗಿ ಬಹುತೇಕರ ಮನೆಯಲ್ಲಿ ವಾರದಲ್ಲಿ ಎರಡ್ಮೂರು ಬಾರಿಯಾದರೂ ಇಡ್ಲಿ ಮಾಡ್ತಾರೆ. ಹೀಗಾಗಿ ಮನೆಯ ಕೆಲ ಸದಸ್ಯರು ಇಡ್ಲಿ ತಿಂದು ತಿಂದು ಸಾಕಾಗಿದೆ ಅಂತಾರೆ. ಆಗ ಮಾಡಿರುವ ಇಡ್ಲಿ ಹಾಗೆ ಉಳಿದು ಬಿಡುತ್ತವೆ. ಹೀಗೆ ಉಳಿದ ಇಡ್ಲಿಯನ್ನ ಬಿಸಾಡುವ ಬದಲು ಗರಿಗರಿ ಪಕೋಡಾ ಮಾಡಬಹುದು.

ಅರೇ, ಇಡ್ಲಿಯಿಂದ ಪಕೋಡಾ ಎಂದು ಕನ್ ಫ್ಯೂಸ್ ಆಗಬೇಡಿ. ಖಂಡಿತ ಮಾಡಬಹುದು. ಮೈದಾ ಹಿಟ್ಟು, ಕಾರ್ನ್ ಫ್ಲೋರ್(ಮೆಕ್ಕೆಜೋಳದ ಹಿಟ್ಟು), ಒಂದಿಷ್ಟು ಕೆಂಪು ಖಾರ, ಉಪ್ಪು, ಮೆಣಸಿನ ಪುಡಿ, ಸೋಯಾ ಸಾಸ್ ಹಾಕಿ ನೀರಿನಲ್ಲಿ ಕಲಸಿ. ಇದು ಹದವಾಗಿ ಭಜ್ಜಿ ಮಾಡುವ ಹಿಟ್ಟಿನ ರೀತಿ ರೆಡಿ ಮಾಡಿ. ಬಳಿಕ ಉಳಿದಿರುವ ಇಡ್ಲಿಯನ್ನ ನಾಲ್ಕು ಪೀಸ್ ಗಳಂತೆ ಕಟ್ ಮಾಡಿ, ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಕರಿಯಿರಿ. ಅಲ್ಲಿಗೆ ಗರಿಗರಿ ಇಡ್ಲಿ ಪಕೋಡಾ ರೆಡಿ.

ಮಳೆಗಾಲಕ್ಕೆ ಆಗಾಗ ಒಂದಿಷ್ಟು ಕುರುಕಲು ತಿಂಡಿ ಬೇಕು. ಬಿಸಿಬಿಸಿಯಾಗಿ ತಿನ್ನುತ್ತಾ ಒಂದು ಕಪ್ ಚಾ ಸೇವಿಸಿದರೆ ಸಾಕು ಸಂಜೆಯ ಸಮಯ ಹಿತವಾಗಿರುತ್ತೆ. ಇಡ್ಲಿ ಪಕೋಡಾ ಒಮ್ಮೆ ಟ್ರೈ ಮಾಡಿ ನೋಡಿ.




Leave a Reply

Your email address will not be published. Required fields are marked *

error: Content is protected !!