ಇದು ಸಿಂದಗಿ ಪುರಸಭೆಯ ಅಂದಾ ದರ್ಬಾರ್

570

ಪ್ರಜಾಸ್ತ್ರ ವಿಶೇಷ ಸುದ್ದಿ

ಸಿಂದಗಿ: ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿನ ಪುರಸಭೆ ಅಧಿಕಾರಿಗಳು, ಸಿಬ್ಬಂದಿಗೆ ಹೇಳುವವರು ಕೇಳುವವರು ಯಾರೂ ಇಲ್ಲ. ಇಲ್ಲಿ ಇವರು ಆಡಿದ್ದೇ ಆಟ. ಕೈ ಚಾಚುವ ಪರಂಪರೆ ಇನ್ನೂ ನಿಂತಿಲ್ಲ. ಇದೆ ವಿಚಾರಕ್ಕೆ ಈ ಹಿಂದೆ ಮೂವರು ಸಿಕ್ಕು ಬಿದ್ದು, ಕೇಸ್ ನಡೆಯುತ್ತಿದೆ. ಹೀಗಿದ್ರೂ, ಇಲ್ಲಿಯವರಿಗೆ ಬುದ್ದಿ ಬಂದಿಲ್ಲ. ಹೀಗಾಗಿ ರಾಜಾರೋಷವಾಗಿ ಸಾರ್ವಜನಿಕರಿಂದ ಹಣ ಕೀಳುತ್ತಾರೆ ಅನ್ನೋ ಗಂಭೀರ ಆರೋಪವಿದೆ. ಇಂಥಾ ಪುರಸಭೆ ಆಗಸ್ಟ್ 20ರಂದು ಕರೆದಿರುವ ಟೆಂಡರ್ ವಿಚಾರದಲ್ಲಿನ ಹುಳುಕನ್ನ ‘ಪ್ರಜಾಸ್ತ್ರ’ ಬಯಲು ಮಾಡ್ತಿದೆ ನೋಡಿ.

ಪುರಸಭೆ ವ್ಯಾಪ್ತಿಯಲ್ಲಿನ ಸಂತೆಕರ ವಸೂಲಿ ಸಂಬಂಧ ಆಗಸ್ಟ್ 20, 2020ರಂದು 12.30ಕ್ಕೆ ಟೆಂಡರ್ ಕರೆಯಲಾಗಿದೆ. ಈ ಸಂಬಂಧ ಭಿತ್ತಿಪತ್ರ ಹೊರಡಿಸಲಾಗಿದೆ. ಪತ್ರಿಕೆ ಜಾಹೀರಾತು ಸಹ ನೀಡಲಾಗಿದೆ. ಅಧಿಕೃತವಾಗಿ ಕರೆಯಲಾದ ಟೆಂಡರ್ ಪ್ರಕ್ರಿಯೆ ಷರತ್ತುಗಳಲ್ಲಿ ಗೊಂದಲವೇ ತುಂಬಿಕೊಂಡಿದೆ. ಇದರಲ್ಲಿ ಬಹುಮುಖ್ಯವಾಗಿ ಈ ಟೆಂಡರ್ ನಲ್ಲಿ ಭಾಗವಹಿಸುವವರು 2 ಲಕ್ಷ ರೂಪಾಯಿ ಠೇವಣಿ ಇಡಬೇಕು. ಇದರ ಜೊತೆಗೆ ಟೆಂಡರ್ ಮಂಜೂರಾದವರು ಒಂದು ವರ್ಷದವರೆಗೆ 25 ಸಾವಿರ ರೂಪಾಯಿ ಠೇವಣಿ ಇಡಬೇಕಂತೆ. ಅದು ಬಡ್ಡಿ ರಹಿತವಾಗಿ. ಇದರ ಜೊತೆಗೆ ಷರತ್ತಿನ ಒಪ್ಪಿಗೆ ಪತ್ರ, ಬೇ ಬಾಕಿ ಎಲ್ಲವನ್ನೂ ಭಾಗವಹಿಸುವ ಮೊದಲು ತುಂಬಿರಬೇಕು ಎಂದು ಸೂಚಿಸಲಾಗಿದೆ.

ಇದನ್ನ ನಾನು ನೋಡಿಲ್ಲ. ನೋಡಿ ನಿಮ್ಗೆ ಹೇಳುತ್ತೇನೆ

ಸ್ನೇಹಲ್ ಲೋಖಂಡೆ, ಉಪವಿಭಾಗಾಧಿಕಾರಿ, ಇಂಡಿ

ಹೀಗೆ ಹಲವು ಷರತ್ತುಗಳನ್ನ ವಿಧಿಸಿರುವ ಸಿಂದಗಿ ಪುರಭೆ ಈ ಸಂತೆ ಕರವಸೂಲಿ ಅವಧಿ ಕೇವಲ 10 ದಿನ ಮಾತ್ರ. ಆಗಸ್ಟ್ 21, 2020ರಿಂದ ಆಗಸ್ಟ್ 31, 2020ರ ವರೆಗೆ ಮಾತ್ರವೆಂದು ತಿಳಿಸಲಾಗಿದೆ. ಎಸಿ ಹಾಗೂ ಪುರಸಭೆ ಮುಖ್ಯಾಧಿಕಾರಿ ಅವರ ಸಹಿಯಿದೆ ಎಂದು ತಿಳಿಸಿ ನೀಡುರುವ ಅಧಿಕೃತ ಜಾಹೀರಾತು ಹಾಗೂ ಭಿತ್ತಿಪತ್ರದಲ್ಲಿನ ಗೋಲ್ ಮಾಲ್ ಇದು. ಈ ಬಗ್ಗೆ ಪುರಸಭೆ ಸಿಬ್ಬಂದಿಯೊಬ್ಬರಿಗೆ ಕೇಳಿದ್ರೆ 7 ತಿಂಗಳ ಅವಧಿ ಇರುತ್ತೆ ಅಂತಾರೆ. ಇಲ್ಲಿ ನೋಡಿದ್ರೆ 10 ದಿನ ಅವಧಿ ಇದೆ. ಇದನ್ನ ನೋಡಿದವರು, ಓದಿದವರು ಎಷ್ಟು ಜನ ಟೆಂಡರ್ ನಲ್ಲಿ ಭಾಗವಹಿಸ್ತಾರೆ. ಈ ರೀತಿಯ ಗೊಂದಲ ಸೃಷ್ಟಿ ಮಾಡಿ, ಬೇಕಾದವರಿಗೆ ಟೆಂಡರ್ ಕೊಟ್ಟು ಎಂದಿನಂತೆ ತಮ್ಮ ಆಟ ನಡೆಸಬಹುದು ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ. ಕೂಡಲೇ ಇದಕ್ಕೆ ಸಂಬಂಧಿಸಿದ ಮೇಲಾಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ.




Leave a Reply

Your email address will not be published. Required fields are marked *

error: Content is protected !!