ಜಮ್ಮು-ಕಾಶ್ಮೀರದಲ್ಲಿ ಕರ್ಪ್ಯೂ.. ಒಮರ್, ಮೆಹಬೂಬಾ ಗೃಹಬಂಧನ

406

ಜಮ್ಮು-ಕಾಶ್ಮೀರ: ಜಮ್ಮು-ಕಾಶ್ಮೀರ ರಾಜಧಾನಿ ಶ್ರೀನಗರದಲ್ಲಿ ಭಾನುವಾರ ಮಧ್ಯರಾತ್ರಿಯಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಹೀಗಾಗಿ ಮಾಜಿ ಸಿಎಂಗಳಾದ ಒಮರ್ ಅಬ್ದುಲ್ಲಾ, ಮೆಹಬೂಬಾ ಮುಪ್ತಿ ಸೇರಿದಂತೆ ಪೀಪಲ್ ಕಾನ್ಫರೆನ್ಸ್ ಮುಖ್ಯಸ್ಥ ಸಜಾದ ಗಿನಿ ಲೊನ್ ಅವರನ್ನ ಗೃಹ ಬಂಧನದಲ್ಲಿಡಲಾಗಿದೆ.

ಇನ್ನು ಕಾಶ್ಮೀರದಾದ್ಯಂತ ಇಂಟರ್ ನೆಟ್ ಸಂಪರ್ಕ, ಮೊಬೈಲ್ ನೆಟ್ ವರ್ಕ್ ಬಂದ್ ಮಾಡಲಾಗಿದೆ. ಹೀಗಾಗಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ಸ್ಯಾಟ್ ಲೈಟ್ ಫೋನ್ ಯ್ಯೂಸ್ ಮಾಡ್ತಿದ್ದಾರೆ. ಈ ಬಗ್ಗೆ ಉಮರ್ ಹಾಗೂ ಮೆಹಬೂಬಾ ಅವರು ಸರಣಿ ಟ್ವೀಟ್ ಮಾಡಿದ್ದಾರೆ. ಕಾಶ್ಮೀರದಲ್ಲಿ ಏನು ನಡೆಯುತ್ತಿದೆ ಗೊತ್ತಿಲ್ಲ. ನಮ್ಮನ್ನ ಯಾಕೆ ಗೃಹಬಂಧನದಲ್ಲಿಟ್ಟಿದ್ದಾರೆ ಅನ್ನೋದು ಗೊತ್ತಿಲ್ಲ. ಅಲ್ಲಾಹುನು ನಮ್ಮನ್ನ ರಕ್ಷಿಸುವವನು ಅಂತಾ ಹೇಳಿದ್ದಾರೆ.

ಒಮರ್, ಮೆಹಬೂಬಾ ಮುಪ್ತಿ ಪರವಾಗಿ ಕಾಂಗ್ರೆಸ್ ನ ಶಶಿ ತರೂರ ಧ್ವನಿ ಎತ್ತಿದ್ದು, ಸಂಸತ್ ಅಧಿವೇಶನದಲ್ಲಿ ಇದರ ಬಗ್ಗೆ ಮಾತ್ನಾಡುವುದಾಗಿ ಹೇಳಿದ್ದಾರೆ. ಸಿಪಿಐಎಂ ಶಾಸಕ ವೈಎಂ ತಾರಿಗಾಮಿ, ಕಾಂಗ್ರೆಸ್ ಮುಖಂಡ ಉಸ್ಮನ ಮಜಿದ ತಮ್ಮನ್ನು ಕೂಡ ಗೃಹಬಂಧನದಲ್ಲಿಟ್ಟಿದ್ದಾರೆ ಅಂತಾ ಹೇಳಿದ್ದಾರೆ. ಆದ್ರೆ, ಈ ಬಗ್ಗೆ ಅಧಿಕೃತ ಮಾಹಿತಿಯಿಲ್ಲ.

ಭಾನುವಾರ ಮಧ್ಯರಾತ್ರಿಯಿಂದ ಕರ್ಪ್ಯೂ ಜಾರಿ ಮಾಡಿರುವುದ್ರಿಂದ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಸಭೆ, ಸಮಾರಂಭ, ಮೆರವಣಿಗೆಯನ್ನ ಸಂಪೂರ್ಣವಾಗಿ ನಿರ್ಬಂಧ ಹೇರಲಾಗಿದೆ.




Leave a Reply

Your email address will not be published. Required fields are marked *

error: Content is protected !!