ಕಂದಕಕ್ಕೆ ಬಿದ್ದ ಮಿನಿ ಬಸ್: 9 ಜನರ ಸಾವು

249

ಪ್ರಜಾಸ್ತ್ರ ಸುದ್ದಿ

ಜಮ್ಮು: ಕಣಿವೆ ನಾಡಿನಲ್ಲಿ ಮಿನಿ ಬಸ್ ವೊಂದು ಕಂದಕ್ಕೆ ಉರುಳಿಬಿದ್ದ ಪರಿಣಾಮ 9 ಜನರು ಮೃತಪಟ್ಟಿದ್ದಾರೆ. ದೋಡಾ ಜಿಲ್ಲೆಯಿಂದ ಥಾತ್ರಿಗೆ ಹೊರಟಿದ್ದ ಮಿನಿ ಬಸ್ ಸುಯಿ ಗೌರಿ ಎಂಬಲ್ಲಿ ಪಲ್ಟಿಯಾಗಿದೆ. 9 ಜನ ಸಾವನ್ನಪ್ಪಿದ್ದರೆ 15 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಂದಕ್ಕೆ ಬಿದ್ದ ಬಸ್ ಎರಡು ತುಂಡಾಗಿದೆ. ಸ್ಥಳದಲ್ಲಿ 8 ಮಂದಿ ಮೃತಪಟ್ಟರೆ ಆಸ್ಪತ್ರೆಗೆ ಸಾಗಿಸುವಾಗ ಒಬ್ಬರು ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಹೆಲಿಕಾಪ್ಟರ್ ಮೂಲಕ ಜಮ್ಮುವಿನಲ್ಲಿರುವ ಸರ್ಕಾರ ಆಸ್ಪತ್ರೆಗೆ ದಾಖಲಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!