ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

410

ಶ್ರೀನಗರ: ದಕ್ಷಿಣ ಕಾಶ್ಮೀರದ ಸೊಫಿಯಾನ್ ಜಿಲ್ಲೆಯಲ್ಲಿ ಇಬ್ಬರು ಉಗ್ರರನ್ನ ಹೊಡೆದುರುಳಿಸಲಾಗಿದೆ. ಗಡಿ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಇಂದು ಬೆಳಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದರಕನ್ನ ಹತ್ಯೆ ಮಾಡಲಾಗಿದೆ.

ಮಂಗಳವಾರ ರಾತ್ರಿಯಿಂದಲೇ ಕಾರ್ಯಾಚರಣೆ ನಡೆದಿದ್ದು, ಅದು ಇನ್ನೂ ಮುಂದುವರೆದಿದೆ.  ಅಡುತಾಣಗಳಲ್ಲಿ ಕೆಲ ಉಗ್ರರು ಅಡಗಿರುವುದು ತಿಳಿದು ಬಂದಿದೆ. ಜನ್ ಪೊರಾ ಗ್ರಾಮದಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಬಂದ್ಮೇಲೆ ದಾಳಿ ನಡೆಸಲಾಗಿದೆ.

ಈಗಾಗ್ಲೇ ಇಬ್ಬರನ್ನ ಸೆರೆ ಹಿಡಿಯಲಾಗಿದ್ದು, ಇಬ್ಬರನ್ನ ಹತ್ಯೆ ಮಾಡಲಾಗಿದೆ. ಇನ್ನು ಕೆಲವು ಉಗ್ರರು ಅಡಗಿರುವುದ್ರಿಂದ ಕಾರ್ಯಾಚರಣೆ ಮುಂದುವರೆದಿದೆಯಂತೆ. ಕಳೆದ ವಾರ ಇದೆ ಭಾಗದಲ್ಲಿ ಒಬ್ಬನನ್ನ ಹತ್ಯೆ ಮಾಡಲಾಗಿತ್ತು.




Leave a Reply

Your email address will not be published. Required fields are marked *

error: Content is protected !!