ಒಂದು ವಾರದಲ್ಲಿ ವೈರಿಗಳ ಯೋಜನೆ ಬುಡಮೇಲು: ಉಕ್ರೇನ್ ಅಧ್ಯಕ್ಷ

517

ಪ್ರಜಾಸ್ತ್ರ ಸುದ್ದಿ

ಕೀವ್: ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದೆ. ಕಳೆದೊಂದು ವಾರದಿಂದ ಯುದ್ಧ ನಡೆಯುತ್ತಿದೆ. ಖೆರ್ಸನ್ ನಗರವನ್ನು ರಷ್ಯಾ ವಶಪಡಿಸಿಕೊಂಡಿದೆ. ಈ ಬಗ್ಗೆ ಮಾತನಾಡಿರುವ ಉಕ್ರೇನ್ ಅಧ್ಯಕ್ಷ ಝೆಲೆನಸ್ಕಿ, ಒಂದು ವಾರದಲ್ಲಿ ವೈರಿಗಳ ಯೋಜನೆಗಳನ್ನು ಬುಡಮೇಲು ಮಾಡಿದ್ದೇವೆ. ಹೀಗಾಗಿ ರಷ್ಯಾ ಯೋಧರು ಗೊಂದಲದಲ್ಲಿದ್ದಾರೆ ಎಂದಿದ್ದಾರೆ.

ನಮ್ಮ ಜನರಲ್ಲಿ ಎರಡು ವಿಚಾರಗಳಿವೆ. ಒಂದು ಸ್ವತಂತ್ರ ಹಾಗೂ ಸಹೃದಯತೆ. ನಮ್ಮ ಭದ್ರತಾ ಪಡೆ, ಪ್ರಾದೇಶಿಕ ರಕ್ಷಕರು, ರೈತರು ಕೂಡಾ ರಷ್ಯಾ ಸೈನಿಕರನ್ನು ಸೆರೆ ಹಿಡಿಯುತ್ತಿದ್ದಾರೆ. ಅವರಿಗೆ ಯಾಕೆ ಇಲ್ಲಿದ್ದೇವೆ ಅನ್ನೋದೆ ಗೊತ್ತಿಲ್ಲ. ಹೀಗಾಗಿ ರಷ್ಯಾ ಸೈನಿಕರು ಗೊಂದಲದಲ್ಲಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!