ಉನ್ನಾವೋ ಸಂತ್ರಸ್ತೆ ಸಾವು: ರೇಪಿಸ್ಟ್ ಗಳ ಎನ್ ಕೌಂಟರ್ ಗೆ ಒತ್ತಾಯ

358

ಲಖನೌ: ಉನ್ನಾವೋ ಅತ್ಯಾಚಾರ ಸಂತ್ರಸ್ತೆ 23 ವರ್ಷದ ಯುವತಿ ಸಾವನ್ನಪ್ಪಿದ್ದಾಳೆ. ಸತತ 43 ಗಂಟೆಗಳ ಜೀವನ್ಮರಣದ ಹೋರಾಟದಲ್ಲಿ ಸಂತ್ರಸ್ತೆ ಸಾವನ್ನಪ್ಪಿದ್ದಾಳೆ. ಈ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ.

ಇದೇ ಡಿಸೆಂಬರ್ 5ರಂದು ರಾಯ್ ಬರೇಲಿನಲ್ಲಿರುವ ಕೋರ್ಟ್ ಗೆ ತೆರಳುತ್ತಿದ್ದಾಗ, ಬೆಳಗ್ಗೆ 4.30ಕ್ಕೆ ಬೈಸ್ವಾರ್ ಬಿಹಾರ್ ರೈಲು ನಿಲ್ದಾಣಕ್ಕೆ ಹೊರಡ್ತಿದ್ದ ಟೈಂನಲ್ಲಿ, ಗೌರಾ ಕ್ರಾಸ್ ನಲ್ಲಿ ಆಕೆಯನ್ನ ತಡೆದ 6 ಜನ ದುಷ್ಕರ್ಮಿಗಳು ನೋಡು ನೋಡ್ತಿದಂತೆ ಸೀಮೆ ಎಣೆ ಸುರಿದು ಬೆಂಕಿ ಹಚ್ಚಿದ್ರು. ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ರು. ಆದ್ರೆ ಇದೀಗ ಯುವತಿ ಸಾವನ್ನಪ್ಪಿದ್ದಾಳೆ.

2019 ಮಾರ್ಚ್ ನಲ್ಲಿ ಉನ್ನಾವೋ ಅನ್ನೋ ಗ್ರಾಮದಲ್ಲಿ ಅತ್ಯಾಚಾರವೆಸಗಿದ ಇಬ್ಬರನ್ನ ಹಾಗೂ ಅವರ ಮೂವರು ಸ್ನೇಹಿತರನ್ನ ಬಂಧಿಸಲಾಗಿತ್ತು. ಬಳಿಕ ಐವರು ಜಾಮೀನು ಮೇಲೆ ಹೊರ ಬಂದಿದ್ರು. ಇದೀಗ ಆ ನೀಚರು ತಮ್ಮ ರಾಕ್ಷಸಿಗುಣವನ್ನ ತೋರಿಸಿದ್ದಾರೆ. ಇವರನ್ನ ಸಹ ಎನ್ ಕೌಂಟರ್ ಮಾಡಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ. ಉತ್ತರ ಪ್ರದೇಶ ಪೊಲೀಸ್ರು ಹೈದ್ರಾಬಾದ್ ಪೊಲೀಸ್ರ ರೀತಿಯಲ್ಲಿ ಅತ್ಯಾಚಾರಿಗಳನ್ನ ಎನ್ ಕೌಂಟರ್ ಮಾಡಬೇಕೆಂದು ಒತ್ತಾಯಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!