ಪತ್ನಿ ಬಳಿಕ ಸಚಿವ ಸೇರಿ 17 ಮಂದಿ ಸೋಂಕು

348

ಡೆಹ್ರಾಡೋನ್: ಉತ್ತರಾಖಂಡ ಪ್ರವಾಸೋದ್ಯಮ ಸಚಿವ ಸಪ್ತಲ್ ಮಹಾರಾಜ ಸೇರಿದಂತೆ ಅವರ 17 ಜನ ಸಿಬ್ಬಂದಿಯಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಸಚಿವರ ಪತ್ನಿ ಬಳಿಕ ಇತರರಿಗೂ ಸೋಂಕು ತಗುಲಿದೆ.

ಸಚಿವ ಸಪ್ತಲ್ ಮಹಾರಾಜ ಪತ್ನಿ ಮಾಜಿ ಸಚಿವೆ ಅಮೃತಾ ರಾವತ್ ಗೆ ಸೋಂಕು ಕಾಣಿಸಿಕೊಂಡಿದೆ. ಅವರನ್ನ ಭಾನುವಾರ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಇವರ ಪತಿ ಸಚಿವ ಸಪ್ತಲ್ ಸೇರಿದಂತೆ 17 ಜನಕ್ಕೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇನ್ನು ಸಪ್ತಲ್ ಮಹಾರಾಜ, ಶುಕ್ರವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಿದ್ರು.

ಇನ್ನು ಸಚಿವರ ಸಂಪರ್ಕಕ್ಕೆ ಬಂದಿರುವ ಸಿಎಂ ಸೇರಿದಂತೆ ಕೆಲ ಸಚಿವರವನ್ನ ಸಹ ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ಹೇಳಲಾಗ್ತಿದೆ. ಸಪ್ತಲ್ ಮಹಾರಾಜ ಪತ್ನಿ ಅಮೃತಾ ರಾವತ್, ಈ ಹಿಂದೆ ಹರೀಶ ರಾವತ್ ಸರ್ಕಾರದಲ್ಲಿ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!