ಜನಾಂಗೀಯ ಸಂಘರ್ಷ.. ಬಂಕರ್ ಸೇರಿದ ಅಮೆರಿಕ ಅಧ್ಯಕ್ಷ

772

ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ

ವಾಷಿಂಗ್ಟನ್: ಅಮೆರಿಕದಲ್ಲಿ ಜನಾಂಗೀಯ ಸಂಘರ್ಷ ಹಿಂಸಾರೂಪ ಪಡೆದುಕೊಂಡಿದ್ದು ಐದು ಜನ ಬಲಿಯಾಗಿದ್ದಾರೆ. ಹಿಂಸಾಚಾರವನ್ನ ನಿಯಂತ್ರಣ ಮಾಡಲು 40 ನಗರಗಳಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. ಇನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವೈಟ್ ಹೌಸ್ ನ ಬಂಕರ್ ಸೇರಿದ್ದಾರೆ ಎಂದು ತಿಳಿದು ಬಂದಿದೆ.

46 ವರ್ಷದ ಆಫ್ರಿಕಾ ಅಮೆರಿನ್ ಜಾರ್ಜ್ ಫ್ಲಾಯ್ಡ್ ಎಂಬಾತನ ಪೊಲೀಸ್ ಕಸ್ಟಡಿ ಸಾವು ಆಗಿದೆ. ಪೊಲೀಸ್ ಅಧಿಕಾರಿ ಆತನ ಕುತ್ತಿಗೆ ಮೇಲೆ ಕಾಲಿಟ್ಟು ಉಸಿರಾಡಲು ಬಿಡದೆ ಹಿಂಸೆ ನೀಡಿದ್ರಿಂದ ಆತ ಸಾವನ್ನಪ್ಪಿದ್ದ. ಈ ಸಾವು ಜನಾಂಗೀಯ ಸಂಘರ್ಷಕ್ಕೆ ಕಾರಣವಾಗಿದೆ. ಕಳೆದ ಮೂರ್ನಾಲ್ಕು ದಿನಗಳಲ್ಲಿ 2, 564 ಜನರನ್ನ ಬಂಧಿಸಲಾಗಿದೆ.

ವೈಟ್ ಸಮೀಪದ ಕಟ್ಟಡಗಳು, ಸಾರ್ವಜನಿಕ ಆಸ್ತಿಪಾಸ್ತಿಗಳನ್ನ ಪ್ರತಿಭಟನಾಕಾರರು ಭಾನುವಾರ ನಾಶ ಪಡಿಸಿದ್ದಾರೆ. ಈ ಕಾರಣಕ್ಕೆ ಅಧ್ಯಕ್ಷ ಟ್ರಂಪ್ ಅವರನ್ನ, ವೈಟ್ ಹೌಸ್ ನ ನೆಲ ಮಹಡಿಗೆ ಕರೆದುಕೊಂಡು ಹೋಗಲಾಗಿದೆ. ಟ್ರಂಪ್ ಟ್ವೀಟ್ ಮೂಲಕ ಮಾಧ್ಯಮಗಳ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಸರ್ಕಾರದ ವಿರುದ್ಧ ದ್ವೇಷ ಮೂಡಿಸವ ಕೆಲಸ ಮಾಡಲಾಗ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಈ ರೀತಿಯ 1986ರಲ್ಲಿ ನಡೆದಿತ್ತು. ರೆವರೆಂಡ್ ಡಾ. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಕೊಲೆಯಾದ ಹೊತ್ತಿನಲ್ಲಿ ಜನಾಕ್ರೋಶ ಬುಗಿಲೆದ್ದಿತ್ತು. ಹಿಂಸಾರೂಪ ಪಡೆದುಕೊಂಡು ಅಪಾರ ಪ್ರಮಾಣದ ಹಾನಿಯಾಗಿತ್ತು.




Leave a Reply

Your email address will not be published. Required fields are marked *

error: Content is protected !!