ಇತಿಹಾಸ ಬರೆಯುವುದು ವಿಜ್ಞಾನಕ್ಕಿಂತ ಕಠಿಣ ಕೆಲಸ: ಪ್ರೊ.ಕೆ.ಬಿ ಗುಡಸಿ

272

ಪ್ರಜಾಸ್ತ್ರ ಸುದ್ದಿ

ಧಾರವಾಡ: ಇತಿಹಾಸವು ಒಂದು ಮಹತ್ವದ ದಾಖಲೆಯಾಗಿದೆ. ಪ್ರಪಂಚದಾದ್ಯಂತ ಇತಿಹಾಸಕ್ಕೆ ತುಂಬಾ ಮನ್ನಣೆಯಿದ್ದು, ಇತಿಹಾಸ ಬರೆಯುವುದು ವಿಜ್ಞಾನಕ್ಕಿಂತ ಕಠಿಣವಾದ ಕೆಲಸ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಕೆ.ಬಿ ಗುಡಸಿ ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪ್ರಾದೇಶಿಕ ಪತ್ರಾಗಾರ ಇಲಾಖೆ, ಧಾರವಾಡ ಮತ್ತು ಕಾಲೇಜಿನ ಇತಿಹಾಸ ವಿಭಾಗ, ಐಕ್ಯೂಎಸಿ ಅಡಿಯಲ್ಲಿ ಏರ್ಪಡಿಸಿದ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಈ ವೇಳೆ ‘ಕರ್ನಾಟಕ ಏಕೀಕರಣ ಚಳುವಳಿ ಹಾಗೂ ಅವಿಭಜಿತ ಧಾರವಾಡ ಜಿಲ್ಲೆಯ ಸ್ವಾತಂತ್ರ್ಯ ಹೋರಾಟ’ ಎಂಬ ವಿಷಯದ ಮೇಲೆ ಸಂಶೋಧನಾ ಪ್ರಬಂಧಗಳನ್ನ ಮಂಡಿಸಲಾಯ್ತು. ಈ ಬಗ್ಗೆ ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದ ಅಧ್ಯಕ್ಷ ಪ್ರೊ.ಎಸ್.ಕೆ ಕಲ್ಲೋಳಿಕರ ಮಾತ್ನಾಡಿ, ಕರ್ನಾಟಕ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಎಲ್ಲ ವರ್ಗಗಳ ಧ್ವನಿಯನ್ನು ದಾಖಲೀಕರಿಸುವ ಮೂಲಕ ನಿಜವಾದ ಇತಿಹಾಸವನ್ನು ಮರು ಪರಿಶೀಲಿಸುವ ಜವಾಬ್ದಾರಿ ಸಂಶೋಧಕರ ಮೇಲಿದೆ ಎಂದರು.

ಮಂಜುಳಾ ಎಲಿಗಾರ, ಪ್ರೊ.ಅಶೋಕ ಶೆಟ್ಟರ, ಪ್ರೊ. ಎಸ್.ವೈ. ಮುಗಳಿ, ಪ್ರಾಂಶುಪಾಲ ಪ್ರೊ. ಎಸ್.ಬಿ. ಪಾಟೀಲ ವಿಚಾರ ಸಂಕಿರಣ ಕುರಿತು ಮಾತನಾಡಿದರು. ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಬಿ.ಎಚ್ ಮೋರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸಂಗೀತಾ ಕಟ್ಟಿಮನಿ ನಿರೂಪಿಸಿ, ವಂದಿಸಿದರು.




Leave a Reply

Your email address will not be published. Required fields are marked *

error: Content is protected !!