ವಿಜಯ್ 67ನೇ ಸಿನಿಮಾದ ಟೈಟಲ್ ರಿಲೀಸ್

147

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ತಮಿಳಿನ ಸೂಪರ್ ಸ್ಟಾರ್ ದಳಪತಿ ವಿಜಯ್ ನಟನೆಯ 67ನೇ ಚಿತ್ರದ ಟೈಟಲ್ ಲಾಂಚ್ ಮಾಡಲಾಗಿದೆ. ವಾರಿಸು ಚಿತ್ರದ ಸಕ್ಸಸ್ ನಲ್ಲಿರುವ ವಿಜಯ್, ತಮ್ಮ ಅಭಿಮಾನಿಗಳಿಗೆ ಖುಷಿಯ ಸುದ್ದಿ ನೀಡಿದ್ದಾರೆ.

ವಿಜಯ್ ನಟನೆಯ ಮುಂದಿನ ಚಿತ್ರದ ಹೆಸರು ‘ಲಿಯೋ’ ಎಂದು ಇಡಲಾಗಿದೆ. ಬೀಸ್ಟ್ ಚಿತ್ರದ ನಂತರ ಮತ್ತೊಂದು ರಗಡ್ ಲುಕ್ ನಲ್ಲಿ ಎಂಟ್ರಿ ಕೊಡಲು ಸಜ್ಜಾಗುತ್ತಿದ್ದಾರೆ. ಕಳೆದ ವರ್ಷ ಕಮಲ್ ಹಾಸನ್ ಅವರ ವಿಕ್ರಮ್ ಸಿನಿಮಾ ನಿರ್ದೇಶನ ಮಾಡಿ ಯಶಸ್ವಿ ನಿರ್ದೇಶಕ ಎನಿಸಿಕೊಂಡಿರುವ ಲೋಕೇಶ್ ಕನಕರಾಜ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ವಿಜಯ್ ಈ ಚಿತ್ರದಲ್ಲಿ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ವಿಜಯಗೆ ಜೋಡಿಯಾಗಿ 14 ವರ್ಷಗಳ ಬಳಿಕ ತ್ರಿಶಾ ಕಾಣಿಸಿಕೊಳ್ಳುತ್ತಿದ್ದಾರೆ. ಹಿರಿಯ ನಟ ಅರ್ಜುನ್ ಸರ್ಜಾ ಸಹ ಮೇನ್ ರೋಲ್ ಪ್ಲೇ ಮಾಡುತ್ತಿದ್ದು, ಬಾಲಿವುಡ್ ನ ಸಂಜಯ್ ದತ್ ಕನ್ನಡದ ಬಳಿಕ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!