ಅಧಿವೇಶನಕ್ಕೆ ಮಾಧ್ಯಮಗಳಿಗೆ ನಿರ್ಬಂಧ?

340

ಬೆಂಗಳೂರು: ಈ ಬಾರಿಯ ಚಳಿಗಾಲದ ಅಧಿವೇಶನ ಅಕ್ಟೋಬರ್ 10ರಿಂದ 12ರ ವರೆಗೆ ಮೂರು ದಿನಗಳ ಕಾಲ ನಡೆಯಲಿದೆ. ವಿಧಾನಮಂಡಲ ಅಧಿವೇಶನಕ್ಕೆ ಸಚಿವಾಲಯದಿಂದಲೇ ಕ್ಯಾಮೆರಾ ಅಳವಡಿಸಲಾಗ್ತಿದೆಯಂತೆ. ಹೀಗಾಗಿ ಮಾಧ್ಯಮಗಳಿಗೆ ನಿರ್ಬಂಧ ಎನ್ನಲಾಗ್ತಿದೆ.

ಸಚಿವಾಲಯದ ಕ್ಯಾಮೆರಾದಿಂದ ನೀಡುವ ದೃಶ್ಯಗಳನ್ನ ಮಾಧ್ಯಮಗಳು ಪಡೆಯಬೇಕು ಅಂತಾ ಹೇಳಲಾಗ್ತಿದೆ. ಪ್ರತಿಬಾರಿ ಅಧಿವೇಶನ ಟೈಂನಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧ ಹೇರುವ ಪ್ರಯತ್ನ ಮಾಡಲಾಗ್ತಿದೆ. ಆದ್ರೆ, ಆಗ್ತಿಲ್ಲ. ಈ ಬಾರಿ ಮತ್ತೆ ಈ ಪ್ರಯತ್ನಕ್ಕೆ ಮುಂದಾಗಿದ್ದು, ಅಕ್ಟೋಬರ್ 9ಕ್ಕೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತುಕತೆಗೆ ಸರ್ಕಾರ ಆಹ್ವಾನ ನೀಡಿದೆ.

ಈ ಬಗ್ಗೆ ಈಗಾಗ್ಲೇ ಮಾಧ್ಯಮ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿವೆ. ಸ್ವತಂತ್ರವಾಗಿ ನಿರ್ವಹಣೆ ಮಾಡುವುದಕ್ಕೆ ನಿರ್ಬಂಧ ಯಾಕೆ ಎಂದು ಕೇಳಿವೆ.




Leave a Reply

Your email address will not be published. Required fields are marked *

error: Content is protected !!